ಪಂಜ : ಬೆಳ್ಳಾರೆ ವಲಯ ಟೈಲರ್ಸ್ ಅಸೋಸಿಯೇಶನ್ ಮಹಾಸಭೆ

0

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಬೆಳ್ಳಾರೆ ವಲಯ ಸಮಿತಿಯ ವಾರ್ಷಿಕ ಮಹಾಸಭೆ ಜೂ.9ರಂದು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಜರುಗಿತು.

ಬೆಳ್ಳಾರೆ ವಲಯ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ನೆಲ್ಲಿಕಟ್ಟೆ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸುಳ್ಯ ತಾಲೂಕು ಟೈಲರ್ ಸ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ರೈ. ವಲಯ ಕಾರ್ಯದರ್ಶಿ ನಂದಿನಿ ತೃವೇಣಿ ಬೆಳ್ಳಾರೆ, ವಲಯ ಕೋಶಾಧಿಕಾರಿ ರಾಜೀವಿ ಕುಕ್ಕುಜಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶರ್ಮಿಳಾ ರೈ ಬೆಳ್ಳಾರೆ ಸ್ವಾಗತಿಸಿದರು ಮತ್ತು ನಿರೂಪಿಸಿದರು.ನಂದಿನಿ ತೃವೇಣಿ ಬೆಳ್ಳಾರೆ ವರದಿ ವಾಚಿಸಿದರು.ಕೋಶಾಧಿಕಾರಿ ರಾಜೀವಿ ಕುಕ್ಕುಜಡ್ಕ ಲೆಕ್ಕಪತ್ರ ಮಂಡಿಸಿದರು.ಯೋಗೀಶ್ ವಂದಿಸಿದರು.