ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ‘ಯೋಗದಿಂದ ,ಮಹಿಳಾ ಸಬಲೀಕರಣ’ದ ವಿಷಯದ ಕುರಿತು ‘ಯೋಗ ಶಿಬಿರ’

0

ಹತ್ತನೇ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ‘ಯೋಗದಿಂದ ,ಮಹಿಳಾ ಸಬಲೀಕರಣ’ದ ವಿಷಯದ ಕುರಿತಂತೆ ‘ಯೋಗ ಶಿಬಿರ’ ನಡೆಯಿತು. ಯೋಗ ಶಿಬಿರದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಶೋಭಾ ಬೊಮ್ಮೆಟ್ಟಿಯವರು ನೆರವೇರಿಸಿದರು. ಯೋಗ ಶಿಬಿರದ ತರಬೇತುದಾರೆ ಕು. ಶಮಾ ಮಡ್ತಿಲ ಯೋಗದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯೊಂದಿಗೆ ಪ್ರಾತ್ತ್ಯಕ್ಷತೆಯನ್ನು ನೀಡಿದರು. ಉಪನ್ಯಾಸಕಿ ದೀಕ್ಷಿತ ರವರು ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಗಣಕಯಂತ್ರದ ಉಪನ್ಯಾಸಕರಾದ ಹರ್ಷಿತ್ ಜಿ .ಜೆ. ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕಿ ಸಪ್ನಾ.ಪಿ. ರವರು ಉಪಸ್ಥಿತರಿದ್ದರು.