ಸುಳ್ಯ ತಾಲೂಕು ಸಖಾಫಿ ಕೌನ್ಸಿಲ್ ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ : ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ, ಪ್ರಧಾನ ಕಾರ್ಯದರ್ಶಿ : ಸ್ವಬಾಹ್ ಸಖಾಫಿ ಬೀಜಕೊಚ್ಚಿ, ಫೈನಾನ್ಸ್ ಸೆಕ್ರಟರಿ : ಜಬ್ಬಾರ್ ಸಖಾಫಿ ಅಜ್ಜಾವರ



ಪ್ರತಿಷ್ಠಿತ ಜಾಮಿಅಃ ಮರ್ಕಝ್ ನಿಂದ ಬಿರುದು ಪಡೆದು ವಿವಿಧ ಕ್ಷೇತ್ರಗಳಲ್ಲಿ ಸೇವೆಗೈಯ್ಯುವ ಸಖಾಫಿ ವಿದ್ವಾಂಸರ ಸುಳ್ಯ ತಾಲೂಕು ಘಟಕದ ವಾರ್ಷಿಕ ಕೌನ್ಸಿಲ್ ಹಾಗೂ ಜುಲೈ ಎಂಟರಂದು ಸುಲ್ತಾನುಲ್ ಉಲಮಾ ಎ ಪಿ ಉಸ್ತಾದರ ಉಪಸ್ಥಿತಿಯಲ್ಲಿ ನಡೆಯಲಿರುವ ಕರ್ನಾಟಕ ಸಖಾಫಿ ಸಂಗಮದ ಪ್ರಚಾರ ಕಾರ್ಯಕ್ರಮ ಸುನ್ನೀ ಸೆಂಟರ್ ಸುಳ್ಯದಲ್ಲಿ ನಡೆಯಿತು.

ಕೌನ್ಸಿಲ್ ಅಧ್ಯಕ್ಷ ಹಸನ್ ಸಖಾಫಿ ಬೆಳ್ಳಾರೆ ಅಧ್ಯಕ್ಷತೆ ವಹಿಸಿ,ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ಕೊಳ್ತಿಗೆ ಉದ್ಘಾಟಿಸಿದರು.ಕರ್ನಾಟಕ ಸಖಾಫಿ ಸಂಗಮ ಸ್ವಾಗತ ಸಮಿತಿ ಚೇರ್ಮಾನ್ ಮುಹಮ್ಮದಲೀ ಸಖಾಫಿ ಅಶ್ ಅರಿಯ್ಯಾ ವಿಷಯ ಮಂಡಿಸಿದರು.ಪ್ರಧಾನ ಕಾರ್ಯದರ್ಶಿ ಬಶೀರ್ ಸಖಾಫಿ ಮೊಗರ್ಪಣೆ ವರದಿ ವಾಚಿಸಿ,ಲೆಕ್ಕ ಪತ್ರ ಮಂಡಿಸಿದರು.ಉಸ್ತುವಾರಿ ಉಮರ್ ಸಖಾಫಿ ಪರಪ್ಪು ,ಜಿಲ್ಲಾ ಕಾರ್ಯದರ್ಶಿ ಮಹಬೂಬ್ ಸಖಾಫಿ ಶುಭ ಹಾರೈಸಿದರು.

2024-25 ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು.
ಸಲಹಾ ಸಮಿತಿ ಸದಸ್ಯರುಗಳಾಗಿ ಇಬ್ರಾಹಿಂ ಸಖಾಫಿ ಕರಿಂಬಿಲ,ಸುಲೈಮಾನ್ ಸಖಾಫಿ ಎಣ್ಮೂರು,ಹಸನ್ ಸಖಾಫಿ ಬೆಳ್ಳಾರೆ,ಅಬ್ದುಲ್ಲ ಸಖಾಫಿ ಪಾರೆ ಸುಳ್ಯ ನೂತನ ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ,ಪ್ರಧಾನ ಕಾರ್ಯದರ್ಶಿಯಾಗಿ ಸ್ವಬಾಹ್ ಸಖಾಫಿ ಬೀಜಕೊಚ್ಚಿ,ಫೈನಾನ್ಸ್ ಸೆಕ್ರಟರಿಯಾಗಿ ಜಬ್ಬಾರ್ ಸಖಾಫಿ ಅಜ್ಜಾವರ ಉಪಾಧ್ಯಕ್ಷರುಗಳಾಗಿ ಶಾಫಿ ಸಖಾಫಿ ಮೇನಾಲ (ಸಂಘಟನೆ),ಉಸ್ಮಾನ್ ಸಖಾಫಿ ಸುಳ್ಯ (ಕ್ಷೇಮನಿಧಿ),ತಾಜುದ್ದೀನ್ ಸಖಾಫಿ ಮೊಗರ್ಪಣೆ (ಅಧ್ಯಯನ) ಕಾರ್ಯದರ್ಶಿಗಳಾಗಿ ನಿಝಾರ್ ಸಖಾಫಿ ಮುಡೂರು,ಮುಹಮ್ಮದ್ ಹನೀಫ್ ಸಖಾಫಿ ಬೆಳ್ಳಾರೆ,ಸಿದ್ದೀಕ್ ಸಖಾಫಿ ಪೈಂಬಚ್ಚಾಲ್ ಸದಸ್ಯರುಗಳಾಗಿ ಬಶೀರ್ ಸಖಾಫಿ ಮೊಗರ್ಪಣೆ,ಜುನೈದ್ ಸಖಾಫಿ ಜೀರ್ಮುಖಿ,ಅಬ್ದು ಸತ್ತಾರ್ ಸಖಾಫಿ ಬೆಳ್ಳಾರೆ,ಅಬ್ದುರ್ರಹ್ಮಾನ್ ಸಖಾಫಿ ತಂಬಿನಮಕ್ಕಿ,ಇಸ್ಮಾಯೀಲ್ ಸಖಾಫಿ ಪೈಂಬಚ್ಚಾಲ್,ಅಬ್ದುಲ್ ಲತೀಫ್ ಸಖಾಫಿ ಬಾಳಮಕ್ಕಿ,ಶಾಹುಲ್ ಹಮೀದ್ ಸಖಾಫಿ ಬೆಳ್ಳಾರೆ ಆಯ್ಕೆಯಾದರು.

ಬಶೀರ್ ಸಖಾಫಿ ಮೊಗರ್ಪಣೆ ಸ್ವಾಗತಿಸಿ, ಸ್ವಬಾಹ್ ಸಖಾಫಿ ವಂದಿಸಿದರು.
ವಿವಿದೆಡೆ ಸೇವೆಗೈಯ್ಯುವ ತಾಲೂಕಿನ ಸಖಾಫಿಗಳು ಉಪಸ್ಥಿತರಿದ್ದರು.