ಉಚಿತ ಉಚಿತ ಎಂದ ಸರಕಾರದ ನಿಲುವು ಈಗ ಬೆಲೆ ಏರಿಕೆ ಖಚಿತ

0

ಸರಕಾರದ ವಿರುದ್ಧ ಜನ ಬೀದಿಗೆ ಇಳಿದು ಹೋರಾಟವನ್ನು ಮಾಡಿ ಸರಿಯಾದ ರೀತಿಯಲ್ಲಿ ಉತ್ತರ ನೀಡಲಿದ್ದಾರೆ…



ಕಳೆದ ವರುಷ ಬಡವರ ಸರಕಾರ ಎಂದು ಪ್ರಚಾರ ಪಡೆದು ಅಧಿಕಾರಕ್ಕೆ ಬಂದ ಈ ಸರಕಾರ ಈಗ ಏಕಾಏಕಿ ಪೆಟ್ರೋಲ್, ಡಿಸೇಲ್ ಬೆಲೆಯನ್ನು ಹೆಚ್ಚಿಸಿ ಜನಸಾಮಾನ್ಯರ ಬದುಕಿಗೆ ಬರೆಎಳೆದಿದೆ. ಹಿಂದಿನ ಬಾಗಿಲಿನಿಂದ ಕದ್ದು ಎದುರು ಬಾಗಿಲಿನಿಂದ ಉಚಿತವಾಗಿ ಕೊಡುವ ನಾಟಕವನ್ನು ಮಾಡುತ್ತ ಬಂದಿದೆ ಈಮೊದಲು ಠಸೆ ಪೇಪರ್ ಬೆಲೆಯನ್ನು ಹೆಚ್ಚಿಸಿತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಹತಾಶೆಯಲ್ಲಿದೆ. ದೇಶದಲ್ಲಿ ನೂರ ಗಡಿ ದಾಟದ ಕಾಂಗ್ರೆಸ್ ರಾಜ್ಯದಲ್ಲಿ ಪೆಟ್ರೋಲ್ ದರದಲ್ಲಿ ನೂರ ದಾಟಿಸಿ ಜನತಗೆ ಶಾಕ್ ನೀಡಿದೆ. ಮುಂದಿನ ದಿನಗಳಲ್ಲಿ ಈ ಸರಕಾರದ ವಿರುದ್ಧ ಜನಬೀದಿಗೆ ಇಳಿದು ಹೋರಾಟವನ್ನು ಮಾಡಿ ಸರಿಯಾದ ರೀತಿಯಲ್ಲಿ ಉತ್ತರವನ್ನು ನೀಡಲಿದ್ದಾರೆ.
ಸರಕಾರ ಏರಿಸಿ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಅಗ್ರಹಿಸುತ್ತೆನೆ.
-ಶಾಸಕಿ ಭಾಗೀರಥಿ ಮುರುಳ್ಯ,