ಸುಳ್ಯದಲ್ಲಿ ಸಂಭ್ರಮದ ಈದುಲ್ ಅಝ್ಹಾ

0


ತ್ಯಾಗ, ಬಲಿದಾನ ಸತ್ಯ ಮತ್ತು ಧರ್ಮದ ಪಥ ದಲ್ಲಿರಲಿ :ಅಶ್ರಫ್ ಖಾಮಿಲ್ ಸಖಾಫಿ


ಅಶಾಂತಿಯ ಕಾರ್ಮೋಡ ಸರಿದು ಸಹೋದರತೆ, ಮಾನವೀಯತೆ ವಿಜೃಂಭಿಸಲಿ :ಕೆ. ಎಂ. ಮುಸ್ತಫ


ಸುಳ್ಯ ಗಾಂಧಿನಗರ ಕೇಂದ್ರ ಜುಮ್ಮಾ ಮಸ್ಜಿದ್ ನಲ್ಲಿ ಬಕ್ರೀದ್ ಹಬ್ಬ ಈದ್ ನಮಾಜ್, ಖುತುಬಾ ಪ್ರವಚನ, ನಾಡಿನ ಒಳಿತಿಗಾಗಿ ಸಾಮೂಹಿಕ ಪ್ರಾರ್ಥನೆ ಯೊಂದಿಗೆ ಸಡಗರ ಸಂಭ್ರಮ ದಿಂದ ಜರಗಿತು.


ಪವಿತ್ರ ಹಜ್ ಯಾತ್ರೆಯ ಐತಿಹ್ಯ ದ ಹಿನ್ನಲೆಯಲ್ಲಿ ವಿಶ್ವದ ಎಲ್ಲಾ ಭಾಗಗಳಿಂದ ಪವಿತ್ರ ಮಕ್ಕಾ ಶರೀಫ್ ಗೆ ತೆರಳಿ ಅರಫಾ ಬೆಟ್ಟ ದಲ್ಲಿ ಸಂಗಮಿಸಿ ಸಮಾಪ್ತಿ ಗೊಳ್ಳುವ, ಅಲ್ಲಾಹುವಿನ ಸಂಪ್ರೀತಿಗೆ ಪ್ರಾಣಿ ಬಲಿ ಅರ್ಪಿಸಿ ಶ್ರದ್ದೆ ಮತ್ತು ಭಕ್ತಿಯಿಂದ ಆಚರಿಸಲ್ಪಡುವ ಬಕ್ರೀದ್ ಹಬ್ಬ ತ್ಯಾಗ, ಬಲಿದಾನ ದ ಪ್ರತೀಕವಾಗಿ ನಾಡಿನೆಲ್ಲಡೆ ಆಚರಿಸಲಾಗುತ್ತಿದೆ.


ಬೆಳಿಗ್ಗಿನಿಂದಲೇ ಹೊಸ ನವೀನ ಮಾದರಿಯ ಧಿರಿಸುಗಳೊಂದಿಗೆ ಆಗಮಿಸಿ ಶುಭಾಶಯ ವಿನಿಮಯದ ಆಲಿಂಗನ ಖಬರ್ ಝಿಯಾರತ್ ನೊಂದಿಗೆ ಮರಣ ಹೊಂದಿದ ಕುಟುಂಬದ ಸದಸ್ಯರನ್ನು ಸ್ಮರಿಸಲಾಗುತ್ತಿದೆ.


ಗಾಂಧಿನಗರ ಮಸ್ಜಿದ್ ನಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಅಧ್ಯಕ್ಷ ಹಾಜಿ ಕೆ. ಎಂ. ಮಹಮ್ಮದ್ ಕೆಎಂಎಸ್, ಮಾಜಿ ಅಧ್ಯಕ್ಷ ಆದo ಹಾಜಿ, ಕೆಪಿಸಿಸಿ ಅಲ್ಪ ಸಂಖ್ಯಾತ ವಿಭಾಗ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ನಗರ ಪಂಚಾಯತ್ ಸದಸ್ಯರುಗಳಾದ ಕೆ. ಎಸ್. ಉಮ್ಮರ್, ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ಸ್, ಸಿದ್ದೀಕ್ ಕೋಕೋ, ಅನ್ಸಾರಿಯ ಅಧ್ಯಕ್ಷ ಮಜೀದ್ ಜನತಾ, ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್, ಮಸೀದಿ ಪದಾಧಿಕಾರಿಗಳಾದ ಮುಹಿಯದ್ದೀನ್ ಫ್ಯಾನ್ಸಿ, ಹಮೀದ್ ಬೀಜಕೊಚ್ಚಿ, ಇಬ್ರಾಹಿಂ ಶಿಲ್ಪಾ, ಕೆ. ಬಿ. ಅಬ್ದುಲ್ ಮಜೀದ್, ಹಮೀದ್ ಹಾಜಿ, ಖಾದರ್ ಹಾಜಿ, ಅನ್ಸಾರಿಯ ಶಾದಿಮಹಲ್ ಅಧ್ಯಕ್ಷ ಹಾಜಿ ಎಸ್. ಎಂ. ಹಮೀದ್,ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಾಮೊಟ್ಟೆ ಮೊದಲಾದವರು ಉಪಸ್ಥಿತರಿದ್ದರು ಕೆ. ಬಿ. ಇಬ್ರಾಹಿಂ, ಶಾಫಿ ಕುತ್ತಾಮೊಟ್ಟೆ ತದನಂತರ ಎಲ್ಲರೂ ಬಂಧು, ಮಿತ್ರಾದಿಗಳ ಮನೆಗಳಿಗೆ ತೆರಳಿ ಸಿಹಿ, ಊಟ, ಉಪಚಾರ ನಡೆಸಲಾಯಿತು