ಗೂನಡ್ಕ ಮಸೀದಿಯಲ್ಲಿ ಬಕ್ರೀದ್ ನಮಾಝ್ ಮತ್ತು ಸಾಮೂಹಿಕ ಪ್ರಾರ್ಥನೆ

0

ಸಂಪಾಜೆ ಗೂನಡ್ಕದ ಹಿಮಾಯತುಲ್ ಇಸ್ಲಾಂ ಜಮಾಅತ್ ಇದರ ವತಿಯಿಂದ ಪವಿತ್ರ ಈದುಲ್ ಅಳ್ಹಾ ವಿಶೇಷ ಬಕ್ರೀದ್ ನಮಾಝ್ ಹಾಗೂ ಸಾಮೂಹಿಕ ಪ್ರಾರ್ಥನೆ ಜೂ.17 ರಂದು ಗೂನಡ್ಕದ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ನಡೆಯಿತು.

ಖತೀಬರಾದ ಬಹು ಯು.ಕೆ.ಅಬೂಬಕ್ಕರ್ ಸಖಾಫಿ ಅಲ್ ಹರ್ಷದಿ
ಯವರು ನೇತೃತ್ವ ವಹಿಸಿದ್ದರು. ಮುಅಝ್ಝಿನರಾದ ಲತೀಫ್ ಸಖಾಫಿ ಸುಳ್ಯ ರವರು ಉಪಸ್ಥಿತರಿದ್ದರು.

ಜಮಾಅತ್ ಆಡಳಿತ ಸಮಿತಿ ಅಧ್ಯಕ್ಷ ರು ಹಾಗೂ ಸದಸ್ಯರು ಮತ್ತು ಸಮಸ್ತ ಜಮಾಅತರು, ಸಂಘ ಸಂಸ್ಥೆಗಳ ಮತ್ತು ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.