ಮಂಡೆಕೋಲು: ಶ್ರೀ ಮಹಾವಿಷ್ಣುಮೂರ್ತಿ ದೇಗುಲದಲ್ಲಿ ದೃಢ ಕಲಶಾಭಿಶೇಕ

0

ಇತ್ತೀಚೆಗೆ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿ ಮುಳುಗೆದ್ದ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ದೇವರಿಗೆ ದೃಢ ಕಲಶಾಭಿಶೇಕ ಸೇವೆ ಸೋಮವಾರ ನಡೆಯಿತು.

ದೃಢ ಕಲಶಾಭಿಶೇಕದ ವಿಧಿ ವಿಧಾನಗಳು ಕುಂಟಾರು ಶ್ರೀ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ನೆರವೇರಿತು. ಭಾನುವಾರ ಸಂಜೆ 6 ಕ್ಕೆ ದೇವತಾ ಪ್ರಾರ್ಥನೆ, ಬಳಿಕ ಆಚಾರ್ಯವರಣ, ರಾಕ್ಷೋಘ್ನ ಹೋಮ, ವಾಸ್ತುಹೋಮ ಹಾಗೂ ವಾಸ್ತುಬಲಿ ನಡೆಯಿತು.

ಸೋಮವಾರ ಬೆಳಿಗ್ಗೆ 7 ಕ್ಕೆ ಗಣಪತಿ ಹವನ ಹಾಗೂ ಕಲಶ ಪೂಜೆ ನಡೆದು ನಂತರ ಸತ್ಯನಾರಾಯಣ ಪೂಜೆ ಹಾಗೂ ಕಲಶಾಭಿಶೇಕ ನಡೆಯಿತು. ಮಧ್ಯಾಹ್ನ ಮಹಾ ಮಂಗಳಾರತಿಯ ಬಳಿಕ ಅನ್ನ ಸಂತರ್ಪಣೆ ನಡೆದಾಗ ಸಾವಿರರು ಭಗವದ್ಭಕ್ತರು ಪಾಲ್ಗೊಂಡು ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.