ಪೈಲಾರು : ವಿಶ್ವ ಪರಿಸರ ದಿನಾಚರಣೆ

0

ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಶೌರ್ಯ ಯುವತಿ ಮಂಡಲ (ರಿ.)ಪೈಲಾರು ಇದರ ವತಿಯಿಂದ ಪರಿಸರ ದಿನಾಚರಣೆಯನ್ನು ಜೂ. 17 ರಂದು ಪೈಲಾರಿನ ವಠಾರದಲ್ಲಿ ಗಿಡ ನೆಡುವ ಮೂಲಕ ಹಾಗೂ ಯುವತಿ ಮಂಡಲದ ಸದಸ್ಯರಿಗೆ ಹಣ್ಣಿನ ಗಿಡಗಳನ್ನು ನೀಡುವುದರ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ರಾಜೀವಿ ಗೋಳ್ಯಾಡಿ, ಹಾಗೂ ಮುಖ್ಯ ಅತಿಥಿಯಾದ ಶ್ರೀಮತಿ ಕುಸುಮಾವತಿ ಕೋಡ್ತುಗುಳಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ವರ್ಷಿತಾ ಗೋಳ್ಯಾಡಿ ಪ್ರಾರ್ಥಿಸಿದರು, ಶ್ರೀಮತಿ ಪುಷ್ಪಲತಾ ನಾಯರ್ಕಲ್ಲು ಕಾರ್ಯಕ್ರಮವನ್ನು ನಿರೂಪಿಸಿದರು, ಹಸ್ತವಿ ಮಡಪ್ಪಾಡಿ ಸ್ವಾಗತಿಸಿದರು ಹಾಗೂ ಶ್ರೀಮತಿ ಶ್ವೇತಾ ನಾಯರ್ ಕಲ್ಲು ವಂದಿಸಿದರು.