ವಿರಾಜೆಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ ವೇಳೆ ಶಾಸಕ ಪೊನ್ನಣ್ಣ ಭಾವಚಿತ್ರದ ಪ್ರತಿಕೃತಿಗೆ ಬೆಂಕಿ ಹಚ್ಚಿದ ಹಿನ್ನೆಲೆ

0

ಸಂಪಾಜೆ ಚೆಕ್ ಪೋಸ್ಟ್ ಬಳಿ ಕಾಂಗ್ರೆಸ್ ವತಿಯಿಂದ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

ರಾಜ್ಯ ಸರ್ಕಾರದ ಇಂಧನ ಬೆಲೆ ಏರಿಕೆಯನ್ನು ವಿರೋಧಿಸಿ ವಿರಾಜಪೇಟೆ ಬಿಜೆಪಿ ವತಿಯಿಂದ ಜೂ.20ರಂದು ಸರ್ಕಾರದ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅವರ ಭಾವಚಿತ್ರದ ಪ್ರತಿಕೃತಿಗೆ ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ಕೊಡಗು ಸಂಪಾಜೆ , ಚೆಂಬು ಹಾಗೂ ಪೆರಾಜೆಯ ಕಾಂಗ್ರೆಸ್ ವತಿಯಿಂದ ಜೂ.22ರಂದು ಸಂಪಾಜೆಯ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಬಳಿ ಬಿಜೆಪಿ ವಿರುದ್ಧ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಯಿತು.

ಮೊದಲಿಗೆ ಮೌನ ಪ್ರತಿಭಟನೆ ಆರಂಭಿಸಿದ ಕಾಂಗ್ರೆಸ್ ನಾಯಕರು ಬಳಿಕ ಬಿಜೆಪಿ ವಿರುದ್ಧ ದಿಕ್ಕಾರ ಕೂಗಿ ಸಾಂಕೇತಿಕವಾಗಿ ಸಂಪಾಜೆಯ ಚೆಕ್ ಪೋಸ್ಟ್ ಬಳಿ ಮೆರವಣಿಗೆಯಲ್ಲಿ ಸಾಗಿ ಪ್ರತಿಕೃತಿ ದಹನಕ್ಕೆ ಮುಂದಾದ ವೇಳೆ ಪೊಲೀಸರು ತಡೆದರು.

ಬಳಿಕ ಕೊಡಗಿನ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖಂಡ ಸೂರಜ್ ಹೊಸೂರು ಮಾತನಾಡಿದರು.


ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರುಗಳಾದ ಮಾಜಿ ಜಿ.ಪಂ. ಸದಸ್ಯ ಮೊಯ್ದೀನ್ ಕುಂಞಿ ಕೊಯನಾಡು, ಪಿ.ಎಲ್. ಸುರೇಶ್, ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಸೂರಜ್ ಹೊಸೂರು, ತಿರುಮಲ ಸೋನ, ಶ್ರೀಮತಿ ತುಳಸಿ ಗಾಂಧಿಪ್ರಸಾದ್, ಮನು ಪೆರುಮುಂಡ, ವಿಜಯಕುಮಾರ್ ಕನ್ಯಾನ, ರಿತಿನ್ ಡೆಮ್ಮಲೆ, ಉಮೇಶ್ ನಿಡುಬೆ, ಹನೀಫ್ ಕೊಯನಾಡು, ‌‌ಮಾಜಿ ಗ್ರಾ.ಪಂ.ಸದಸ್ಯೆ ಶ್ರೀಮತಿ ರಾಜೇಶ್ವರಿ, ಸೋಮಣ್ಣ ಬಾಲಂಬಿ, ಶ್ರೀಮತಿ ಕುಸುಮ ಯೋಗೀಶ್ವರ್, ಆದಂ ಸಂಟ್ಯಾರ್, ಹರಿಪ್ರಸಾದ್ ಸಂಪಾಜೆ, ರವಿರಾಜ್ ಹೊಸೂರು, ನಿತಿನ್ ದಂಬೆಕೋಡಿ, ಜಯರಾಮ ಪೆರುಮುಂಡ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.