ರೋಟರಿಯ ಸಹಾಯಕ ಗವರ್ನರ್ ಆಗಿ ರೊ| ಕೆ. ವಿನಯ ಕುಮಾರ್

0

2024-25ನೇ ಸಾಲಿಗೆ ರೋಟರಿ ಜಿಲ್ಲೆ 3181 ವಲಯ 5ರ ಸಹಾಯಕ ಗವರ್ನರ್ ಆಗಿ ಬೆಳ್ಳಾರೆಯ ಭಾರದ್ವಾಜ ಪ್ರಿಂಟರ್ಸ್ ನ ಮಾಲಕರಾದ ರೊ| ಕೆ. ವಿನಯ ಕುಮಾರ್ ನಿಯೋಜಿತಗೊಂಡಿದ್ದಾರೆ. ರೋಟರಿ ಕ್ಲಬ್ ಬೆಳ್ಳಾರೆ ಟೌನ್‌ನ 2017-18ನೇ ಸಾಲಿನ ಅಧ್ಯಕ್ಷರಾಗಿದ್ದ ಅವಧಿಗೆ ಕ್ಲಬ್ಬಿಗೆ ರೋಟರಿ ಜಿಲ್ಲೆ 3181ರ 26 ಜಿಲ್ಲಾ ಪ್ರಶಸ್ತಿಗಳು ದೊರೆತಿದೆ. 2018-19ರಲ್ಲಿ ಪ್ರಿಸರ್ವ್ ಪ್ಲಾನೆಟ್ ಅರ್ಥ್, 2020-21ರಲ್ಲಿ ರೋಟರಿ ಪೀಸ್ ಫೆಲೊಶಿಪ್,2022-23ರಲ್ಲಿ ರೋಟರಿ ಇಂಡಿಯಾ, 2023-24ರಲ್ಲಿ ಸಾಕ್ಷರತಾ ವಿಭಾಗಗಳ ಜಿಲ್ಲಾ ವೈಸ್ ಚೇರ್‌ಮೆನ್ ಆಗಿ ಸೇವೆ ಸಲ್ಲಿಸಿದ್ದಾರೆ. 2023ನೇ ಇಸವಿಯಲ್ಲಿ ರೋಟರಿ ಫೌಂಡೇಶನ್‌ನಿಂದ ನಿರ್ವಹಿಸಲ್ಪಡುವ ರೋಟರಿ ಪೀಸ್ ಸೆಂಟರ್‌ನ ಟ್ರೈನ್ಡ್‌ ಎಂಡೋರ್ಸರ್ ಆಗಿದ್ದರು.
ವಾಣಿಜ್ಯ, ವರ್ತಕ ಮತ್ತು ಕೈಗಾರಿಕಾ ಸಂಘ ಬೆಳ್ಳಾರೆಯ ಸ್ಥಾಪಕ ಕಾರ್ಯದರ್ಶಿಯಾಗಿದ್ದು ಪ್ರಸ್ತುತ ನಿರ್ದೇಶಕರಾಗಿದ್ದಾರೆ. ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸುಳ್ಯ ತಾಲೂಕು ಘಟಕದ ಕೋಶಾಧಿಕಾರಿ, ಬೆಳ್ಳಾರೆ ಬಾಲವಿಕಾಸ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.