ಬ್ಲೆಸ್ಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಪರಿಷತ್ತಿನ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ

0

ಪೋಕ್ಸೋ ಮತ್ತು ಮಾದಕ ವ್ಯಸನದ ಕುರಿತು ಮಾಹಿತಿ ಕಾರ್ಯಕ್ರಮ

ಬ್ಲೆಸ್ಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಗುತ್ತಿಗಾರಿನಲ್ಲಿ ವಿದ್ಯಾರ್ಥಿ ಪರಿಷತ್ತಿನ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ಮತ್ತು ಪೋಕ್ಸೋ ಮತ್ತು ಮಾದಕ ವ್ಯಸನದ ಕುರಿತು ಮಾಹಿತಿ ಕಾರ್ಯಕ್ರಮ ಜೂ. 22 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಸಂಧ್ಯಾ ರಾಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಪೋಕ್ಸೋ ಮತ್ತು ಮಾದಕ ವ್ಯಸನದ ಕುರಿತು ಮಾಹಿತಿಯನ್ನು ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಟ್ರೀಸಾ ಜಾನ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಸಹ ಶಿಕ್ಷಕಿ ಕುಮಾರಿ ಪ್ರೇಮಲತಾ ರವರು ಸ್ವಾಗತಿಸಿ, ಜೋಸ್ನ ರವರು ವಂದಿಸಿ, ಸಹ ಶಿಕ್ಷಕ ರಜನೀಶ್ ಕಾರ್ಯಕ್ರಮವನ್ನು ನಿರೂಪಿಸಿದರು.. ಶಾಲಾ ನಾಯಕನಾಗಿ ಜಾಕ್ಸನ್ ಡಿಸೋಜಾ, ಉಪನಾಯಕನಾಗಿ ಮೊಹಮ್ಮದ್ ಶಾನಿಬ್, ಶಿಸ್ತು ನಾಯಕಿಯಾಗಿ ಅಲ್ಪೊನ್ಸ, ಉಪ ಶಿಸ್ತು ನಾಯಕಿಯಾಗಿ ಯಜ್ಞ ಡಿ.ಸಿ, ಸಾಂಸ್ಕೃತಿಕ ನಾಯಕಿಯಾಗಿ ದೃತಿ ಕೆ. ವಿ, ಉಪಸಾಂಸ್ಕೃತಿಕ ನಾಯಕಿಯಾಗಿ ಕಶ್ವಿ, ಕ್ರೀಡಾ ನಾಯಕಿಯಾಗಿ ಫಾತಿಮಾತ್ ಸನಾ, ಉಪ ಕ್ರೀಡಾ ನಾಯಕನಾಗಿ ತಸ್ವೀನ್, ಮಾಧ್ಯಮ ನಾಯಕನಾಗಿ ಜಿತನ್, ಉಪಮಾಧ್ಯಮನಾಯಕನಾಗಿ ಪ್ರಜ್ವಲ್ ಕೆಎಸ್, ವಿರೋಧ ಪಕ್ಷದ ನಾಯಕಿಯಾಗಿ ಯಶಸ್ವಿ ಕೆ.ಯಂ ಆಯ್ಕೆಗೊಂಡರು.