ವಿನೋಬನಗರ: ವಿವೇಕಾನಂದ ವಿದ್ಯಾಸಂಸ್ಥೆಯ ನೂತನ ಆಡಳಿತ ಮಂಡಳಿ ರಚನೆ

0

ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆಯ ನೂತನ ಆಡಳಿತ ಮಂಡಳಿಯನ್ನು ಜೂ.22ರಂದು ವಿದ್ಯಾಸಂಸ್ಥೆಯ ಸ್ಥಾಪಕರ ದಿನಾಚರಣೆಯಂದು ರಚಿಸಲಾಯಿತು.

ವಿದ್ಯಾಸಂಸ್ಥೆಯ ಸ್ಥಾಪಕರಾದ ದಿ. ಉಪೇಂದ್ರ ಕಾಮತ್ ಅವರ ಹುಟ್ಟು ಹಬ್ಬದ ಪ್ರಯುಕ್ತ ನಡೆದ ಸ್ಥಾಪಕರ ದಿನಾಚರಣೆಯಂದು ಶಾಲಾ ಸಂಚಾಲಕರಾದ ಕೆ. ಸುಧಾಕರ ಕಾಮತ್ ಅವರು ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಹೆಸರನ್ನು ಘೋಷಿಸಿದರು.

ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ನ. ಸೀತಾರಾಮ, ಸಂಚಾಲಕರಾಗಿ ಡಾ.ಗೋಪಾಲಕೃಷ್ಣ ಭಟ್ ಕಾಟೂರು, ಉಪಾಧ್ಯಕ್ಷರಾಗಿ ಹೇಮಂತ್ ಕಾಮತ್ ಆಯ್ಕೆಯಾದರು.

ಸದಸ್ಯರುಗಳಾಗಿ ಸುಧಾಕರ ಕಾಮತ್ ವಿನೋಬಾನಗರ, ಶ್ಯಾಮ್ ಪ್ರಸಾದ್ ಅಡ್ಡoತಡ್ಕ, ಶ್ರೀಮತಿ ಲತಾ ಮಧುಸೂಧನ್ , ಪುರುಷೋತ್ತಮ ಕಿರ್ಲಾಯ ಶಿವಪ್ರಸಾದ್ ಉಗ್ರಾಣಿಮನೆ, ಹೇಮಂತ್ ಮಠ ಆಯ್ಕೆಯಾದರು.