ನಿಂತಿಕಲ್ಲಿನ ಕೆ.ಎಸ್.ಗೌಡ ಪದವಿ ಪೂರ್ವ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

0

ನಿಂತಿಕಲ್ಲಿನ ವರ್ಷ ನಗರದಲ್ಲಿರುವ ಕೆ ಎಸ್ ಗೌಡ ಪದವಿಪೂರ್ವ ಕಾಲೇಜಿಗೆ 2024–2025 ನೇ ಶೈಕ್ಷಣಿಕ ವರ್ಷಕ್ಕೆ ಪ್ರಥಮ ಪಿಯುಸಿ ಗೆ ದಾಖಲಾದ ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮ ಜೂನ್ 19 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ನಡೆಸಿ ಕೊಟ್ಟ ಈ ಕಾರ್ಯಕ್ರಮದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಆರಂಭದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಮನೋರಂಜನಾ ಆಟಗಳನ್ನು ಆಡಿ ಸಲಾಯಿತು. ಕಾಲೇಜಿಗೆ ಹೊಸತಾಗಿ ನೇಮಕ ಗೊಂಡ ಉಪನ್ಯಾಸಕಿಯರಾದ ಸಂಧ್ಯಾ, ಸಮೀಕ್ಷಾ, ಸೌಮ್ಯ ಹಾಗು ಜಾಸ್ಮಿನ್ ರನ್ನು ಸ್ವಾಗತಿಸಿದರು.


ಸಮಾರೋಪ ಸಮಾರಂಭದಲ್ಲಿ ಉಪನ್ಯಾಸಕರಾದ ಜೀವನ್ ಎಸ್ ಎಚ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಂಸ್ಥೆಯ ನಿಯಮಗಳು, ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ಉಪನ್ಯಾಸಕರಾದ ಉಜ್ವಲ್ ಕೆ ಎಚ್ ಸಂಸ್ಥೆಯ ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳ ಬಗ್ಗೆ ತಿಳಿಸಿ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಸಿಗುವ ವಿವಿಧ ಸೌಲಭ್ಯಗಳ ಬಗ್ಗೆ ತಿಳಿಸಿದರು. ಪ್ರಾಚಾರ್ಯರಾದ ಸದಾನಂದ ರೈ ಕೂವೆಂಜ ಸಂದರ್ಭೋಚಿತವಾಗಿ ಮಾತನಾಡಿದರು. ಉಪನ್ಯಾಸಕಿಯರಾದ ವೇದಾವತಿ ಮತ್ತು ಜ್ಯೋತ್ಸ್ನಾ ಸಹಕರಿಸಿದರು.

ರಚನಾ ಸ್ವಾಗತಿಸಿ ಗಮನ್ ರೈ ವಂದಿಸಿದರು.ವಿದ್ಯಾರ್ಥಿನಿ ಪ್ರಥ್ವಿ ಕಾರ್ಯಕ್ರಮ ನಿರೂಪಿಸಿದರು. ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಅಶೋಕ್ ಕುಮಾರ್ ಕೆ ಎಸ್ ಕಾರ್ಯಕ್ರಮ ಸಂಘಟಕರನ್ನು ಅಭಿನಂದಿಸಿ ಶುಭ ಹಾರೈಸಿದರು.