ಸುಳ್ಯ ಶ್ರೀ ಗಣಪತಿ ಕಲಾ ಕೇಂದ್ರ 2 ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಗಣಪತಿ ಹವನ

0

ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿ ಎ.ಪಿ.ಎಂ.ಸಿ.ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ಗಣಪತಿ ಕಲಾ ಕೇಂದ್ರ 2 ನೇ ವರ್ಷಕ್ಕೆ ಪಾದಾರ್ಪಣೆಯ ಪ್ರಯುಕ್ತ ಗಣಪತಿ ಹವನವು ನಡೆಯಿತು.
ನಾಗಪಟ್ಟಣ ಸದಾಶಿವ ದೇವಸ್ಥಾನದ ಅರ್ಚಕ ಶಿವಪ್ರಸಾದ್ ಕೆದಿಲಾಯ ರವರ ನೇತೃತ್ವದಲ್ಲಿ ಪೂಜೆಯು ನೆರವೇರಿತು. ಕಲಾ ಕೇಂದ್ರದ ಸಂಚಾಲಕ ವಿನೋದ್ ಸರಳಿಕುಂಜ ಹಾಗೂ ಕಲಾ ಕೇಂದ್ರದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಲಾ ಕೇಂದ್ರದಲ್ಲಿ ತಬಲಾ, ಹಾರ್ಮೋನಿಯಂ, ಮೃದಂಗ, ಚೆಂಡೆ, ಕೀಬೋರ್ಡ್,
ಶಾಸ್ತ್ರೀಯ ಸಂಗೀತ, ಕೊಳಲು,ಸುಗಮ ಸಂಗೀತ,ವಯಲಿನ್,
ಸ್ಯಾಕ್ಸೋಫೋನ್,ಗಿಟಾರ್,ಭಜನಾ ತರಬೇತಿಯ ತರಗತಿಗಳು ನುರಿತ ಶಿಕ್ಷಕರಿಂದ ನೀಡಲಾಗುತ್ತಿದೆ ಎಂದು ಸಂಘಟಕರು ತಿಳಿಸಿದರು.