ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದಲ್ಲಿ ನೂತನವಾಗಿ ಪ್ರಾರಂಭಗೊಂಡ ರಂಗಪ್ರೇರಣ ತಂಡ ಅಸ್ತಿತ್ವ

0

ನಾಟಕ “ನಾಣಿ ನಾರಾಯಣ” ಪ್ರಥಮ ಪ್ರದರ್ಶನ

ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ
ವಿದ್ಯಾಲಯದಲ್ಲಿ ನೂತನವಾಗಿ ಪ್ರಾರಂಭಗೊಂಡ ರಂಗಪ್ರೇರಣ ನಾಟಕ ತಂಡದ ಹೊಸ ನಾಟಕ “ನಾಣಿ ನಾರಾಯಣ” ಪ್ರಥಮ ಪ್ರದರ್ಶನ ಜೂ.24 ರಂದು
ನಡೆಯಿತು.

ಈ ನಾಟಕದ ಮೊದಲ ಪ್ರದರ್ಶನ ಉದ್ಘಾಟನೆಯನ್ನು ನಿವೃತ್ತ ಮುಖ್ಯೋಪಾಧ್ಯಾಯ, ಕುಮಾರಸ್ವಾಮಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸುಬ್ರಹ್ಮಣ್ಯ ಅವರು ನೆರವೇರಿಸಿದರು.

ಈ ನಾಟಕದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳು ವಿವಿಧ ಪಾತ್ರಗಳಲ್ಲಿ ಅಭಿನಯಿಸಿದರು. ಈ ನಾಟಕದ ರಂಗ ರೂಪ ವಿಧೇಯನ್, ಸಾಹಿತ್ಯ ಸುರೇಶ್ ಬಾಳಿಲ, ಸಂಗೀತ ದಿವಾಕರ್ ಕಟೀಲು ಹಾಗೂ ಗೌತಮ್ ಬಿರುವ, ನಿರ್ದೇಶನ ಶ್ರೀ ವಿದ್ದು ಉಚ್ಚಿಲ ಮಾಡಿರುತ್ತಾರೆ. ಸಮಾರಂಭದ ವೇದಿಕೆಯಲ್ಲಿ ಶಾಲಾ ಅಧ್ಯಕ್ಷರಾದ ಗಣೇಶ್ ಪ್ರಸಾದ್, ಸಂಚಾಲಕ ಚಂದ್ರಶೇಖರ್ ನಾಯರ್, ಶಾಲಾ ಮುಖ್ಯ ಶಿಕ್ಷಕಿ ವಿದ್ಯಾರತ್ನ ಹಾಗೂ ರಂಗಪ್ರೇರಣ ನಾಟಕ ತಂಡದ ಸಂಯೋಜಕರಾದ ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.
ಮೊದಲ ವೀಕ್ಷಣೆಯನ್ನು ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಮಾಡಿದರು.