ಜೂ.30: ಅಕ್ವಾ ಸಲ್ಯೂಶನ್ ಇಂಜಿನಿಯರ‍್ಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ಸುಳ್ಯ ಶಾಖೆ ಶುಭಾರಂಭ

0

ಅಕ್ವಾ ಸಲ್ಯೂಶನ್ ಇಂಜಿನಿರ‍್ಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ಸುಳ್ಯ ಶಾಖೆಯ ಶುಭಾರಂಭವು ಜೂ.30ರಂದು ಅಂಬಟೆಡ್ಕದ ಆಯುರ್ವೇದ ಮೆಡಿಕಲ್ ಕಾಲೇಜು ಬಳಿಯ ಜೆ.ಸಿ.ಬಿಲ್ಡಿಂಗ್‌ನಲ್ಲಿ ಶುಭಾರಂಭಗೊಳ್ಳಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ , ದೀಪ ಪ್ರಜ್ವಲನೆಯನ್ನು ಪಯಸ್ವಿನಿ ಜೂನಿಯರ್ ಕಾಲೇಜು ಸಂಪಾಜೆ ಇದರ ನಿವೃತ್ತ ಪ್ರಾಂಶುಪಾಲರಾದ ದಾಮೋದರ ಗೌಡ ಕುಯಿಂತೋಡು ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸುಳ್ಯ ನ.ಪಂ.ಮುಖ್ಯಾಧಿಕಾರಿ ಸುಧಾಕರ, ಜೆ.ಸಿ.ಚಾರಿಟೇಬಲ್ ಸುಳ್ಯ ಇದರ ಅಧ್ಯಕ್ಷ ಜಯಪ್ರಕಾಶ್ ಕೆ, ಸೀನಿಯರ್ ಜೇಸಿ ಇಂಟರ್‌ನ್ಯಾಷನಲ್ ಒದರ ಅಧ್ಯಕ್ಷ ಚಂದ್ರಶೇಖರ ನಂಜೆ, ಜೇಸಿಐ ಛೇಂಬರ್ ಸುಳ್ಯ ಇದರ ಅಧ್ಯಕ್ಷ ಗುರುಪ್ರಸಾದ್, ಎನ್‌ಎಂಪಿಯು ಅರಂತೋಡು ಇದರ ನಿವೃತ್ತ ಪ್ರಾಂಶುಪಾಲ ಗಂಗಾಧರ ಕೆ.ಆರ್. ಉಪಸ್ಥಿತರಿರುವರು ಎಂದು ವ್ಯವಸ್ಥಾಪಕ ನಿರ್ದೇಶಕ ಜಯರಾಮ ಚೌಟಾಜೆ ಮತ್ತು ಸುಳ್ಯ ಕಚೇರಿ ವ್ಯವಸ್ಥಾಪಕರಾದ ಹಿಮಕರ ಎಂ. ತಿಳಿಸಿದ್ದಾರೆ.