ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ

0

ಗೌಡ ಸಾರಸ್ವತ ಸಮಾಜಕ್ಕೊಳಪಟ್ಟ 18 ಪೇಟೆ ದೇವಸ್ಥಾನಗಳಲ್ಲೊಂದಾದ ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದಲ್ಲಿ ವರ್ಷಂಪ್ರತಿ ಜರಗುವ ಪ್ರತಿಷ್ಠಾ ವರ್ಧಂತಿ ಜೂ. 28ರಂದು ನಡೆಯಿತು.

ಬೆಳಿಗ್ಗೆ ಪ್ರಾರ್ಥನೆ, ಪೂರ್ವಾಹ್ನ ಶತಕಲಶಾಭಿಷೇಕ, ಮಧ್ಯಾಹ್ನ ಉಭಯ ದೇವರಿಗೆ ಮಹಾಪೂಜೆ ಬಳಿಕ ಭೂರಿಭೋಜನ ನಡೆಯಲಿದೆ.

ರಾತ್ರಿ ದುರ್ಗಾಪರಮೇಶ್ವರಿ ಅಮ್ಮನವರ ಪುಷ್ಪಾಲಂಕಾರ ಪೂಜೆ ನಡೆಯಿತು. ದೇವಸ್ಥಾನದ ಮೊಕ್ತೇಸರರು, ಯುವ ವೃಂದದ ಸದಸ್ಯರು, ಭಕ್ತಾದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.