ಬೆಳ್ಳಾರೆ ರೋಟರಿ ಕ್ಲಬ್ ವತಿಯಿಂದ ಡಾ.ಉದಯಕುಮಾರ್ ಮತ್ತು ಡಾ.ಸಂಧ್ಯಾಲಕ್ಷ್ಮೀ ದಂಪತಿಗೆ ಸನ್ಮಾನ

0

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಜು. 1ರಂದು ರಾಷ್ಟ್ರೀಯ ವೈದ್ಯರ ದಿನಾಚರಣೆ ನಡೆಸಲಾಯಿತು.
ಕಾಣಿಯೂರಿನ ಕುಮಾರ ಕ್ಲಿನಿಕ್ ನ ಮಾಲಕರಾದ ಡಾ| ಉದಯಕುಮಾರ ಹಾಗೂ ಪತ್ನಿ ಡಾ| ಸಂಧ್ಯಾ ಲಕ್ಷ್ಮಿ ಯವರನ್ನು ವಲಯ 5 ಅಸಿಸ್ಟೆಂಟ್ ಗವರ್ನರ್ ರೋ.ವಿನಯಕುಮಾರ್ ಸನ್ಮಾನಿಸಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ವೈದ್ಯರು ರೋಗಿಗಳ ಬಗ್ಗೆ ಅವರಿಗಿರುವ ಕಾಳಜಿ ಹಾಗೂ ವೈದ್ಯನಾಗಿ ಹಳ್ಳಿಯ ಸೇವೆಯ ಬಗ್ಗೆ ವಿವರಿಸಿ ತನ್ನ ಮನದಾಳದ ಮಾತುಗಳನ್ನಾಡಿದರು. ಕ್ಲಬ್ ನ ಅಧ್ಯಕ್ಷರಾದ ರೋ. ಚಂದ್ರಶೇಖರ ರೈ ಯವರು ಸ್ವಾಗತಿಸಿದರು. ಕ್ಲಬ್ ನ ಕಾರ್ಯದರ್ಶಿ ರೋ.ಎ.ಕೆ ಮಣಿಯಾಣಿಯವರು ವಂದಿಸಿದರು. ಕ್ಲಬ್ ನ ಸದಸ್ಯರಾದ ಜೆ .ಪಿ.ಪಿ ರೋ. ಶಶಿಧರ ಬಿ.ಕೆ ಪೂರ್ವಾಧ್ಯಕ್ಷರುಗಳಾದ ರವೀಂದ್ರ ಗೌಡ, ನವೀನ ಕುಮಾರ ರೈ ತಂಬಿನಮಕ್ಕಿ , ಬಿ ಪ್ರಭಾಕರ ಆಳ್ವ, ರೊ.ಬಾಲಕೃಷ್ಣ ಮಡ್ತಿಲ ಉಪಸ್ಥಿತರಿದ್ದರು.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಯರ್ತಡ್ಕದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು, ತಡಗಜೆ ಅಂಗನವಾಡಿಗೆ ಆಹಾರದ ದಾಸ್ತಾನು ಡಬ್ಬಗಳನ್ನು ನೀಡಲಾಯಿತು. ಅನಾಥಾಶ್ರಮಕ್ಕೆ ಮಧ್ಯಾಹ್ನದ ಭೋಜನ ಹಾಗೂ ಸಿಹಿ ತಿಂಡಿಯನ್ನು ವಿತರಿಸಲಾಯಿತು.