ಗಾಂಧಿನಗರ ಆಲೆಟ್ಟಿ ಕ್ರಾಸ್ ಬಳಿ ರಸ್ತೆ ಬಳಿ ವಿದ್ಯುತ್ ಕಂಬ ಅಳವಡಿಕೆ

0

ನಗರ ಪಂಚಾಯತ್ ಸದಸ್ಯರುಗಳಿಂದ ಆಕ್ಷೇಪ

ಅಧಿಕಾರಿಗಳು ಸ್ಥಳಕ್ಕೆ ಬಂದು ತೆರವು ಗೊಳಿಸಿಕೊಡುವ ಭರವಸೆ

ಗಾಂಧಿನಗರ ಆಲೆಟ್ಟಿ ಕ್ರಾಸ್ ಬಳಿ ಮುಖ್ಯ ರಸ್ತೆಯ ಬದಿಯಲ್ಲಿ ಮೆಸ್ಕಾಂ ಇಲಾಖೆ ವತಿಯಿಂದ ಜು. 2 ರಂದು ವಿದ್ಯುತ್ ನೂತನ ಕಂಬವನ್ನು ಅಳವಡಿಸಲಾಯಿತು. ಆದರೆ ಅಳವಡಿಸಿರುವ ಕಂಬ ಮುಖ್ಯ ರಸ್ತೆಗೆ ಹಾಕಿಕೊಂಡಿದ್ದು ಅಲ್ಲದೆ ಇದು ರಸ್ತೆಯಲ್ಲಿಯೇ ಇರಿಸಿದ ಹಾಗಿದೆ ಎಂದು ನಗರ ಪಂಚಾಯತ್ ಸದಸ್ಯರುಗಳಾದ ಶರೀಫ್ ಕಂಠಿ, ಹಾಗೂ ನಾಮ ನಿರ್ದೇಶಕ ಸದಸ್ಯರುಗಳಾದ ರಾಜು ಪಂಡಿತ್, ಸಿದ್ದೀಕ್ ಕೊಕ್ಕೊ ರವರು ಆಕ್ಷೇಪ ವ್ಯಕ್ತ ಪಡಿಸಿ ಸ್ಥಳಕ್ಕೆ ಅಧಿಕಾರಿಗಳು ಬಂದು ತೆರವು ಗೊಳಿಸಿಕೊಡುವ ಭರವಸೆ ನೀಡಿದ ಬಳಿಕ ವಿಷಯ ಶಮನಗೊಂಡ ಘಟನೆ ನಡೆಯಿತು.

ಸುಳ್ಯದ ಕಲ್ಲುಮುಟ್ಲು ಪಂಚಾಯತ್ ನೀರಿನ ಘಟಕ ದ ಬಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮೆಸ್ಕಾಂ ವತಿಯಿಂದ ಆಲೆಟ್ಟಿ ತಿರುವಿನಿಂದ ಅಲ್ಪ ಕೆಳಭಾಗದಲ್ಲಿ ರಸ್ತೆಯ ಬದಿ ಈ ಕಂಬವನ್ನು ಅಳವಡಿಸಲಾಗಿತ್ತು. ಅಲ್ಲದೆ ಅಲ್ಲಿ ಈ ಮೊದಲು ಒಂದು ಕಂಬ ಇತ್ತಾದರೂ ಅದಕ್ಕೆ ನೂತನ ಲೈನ್ ಎಳೆಯುವ ವೇಳೆ ಕಂಬ ಕಿರಿದಾದ ಕಾರಣ ವಾಹನ, ಮತ್ತು ಅಕ್ಕ ಪಕ್ಕದ ಅಂಗಡಿಗಳಿಗೆ ಸಮಸ್ಯೆ ಬರಬಹುದೆಂದು ರೌಂಡ್ ಆಕೃತಿಯ ಉದ್ದದ ಕಂಬವನ್ನು ಅಳವಡಿಸುವ ಕಾರ್ಯ ಮಾಡಿದರು.

ಆದರೆ ಈ ಭಾಗದ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದ್ದು,ರಸ್ತೆಯ ವಿಸ್ತೀರ್ಣ ಕಡಿಮೆ ಇರುವ ಹಿನ್ನಲೆಯಲ್ಲಿ ಸಂಚಾರ ತೊಡಕು ಉಂಟಾಗುವ ಸಂಭವ ಮತ್ತು ಮುಂದಿನ ದಿನಗಳಲ್ಲಿ ರಸ್ತೆ ಅಗಲೀಕರಣ ವೇಳೆ ಮತ್ತೆ ಕಂಬ ತೆರವು ಗೊಳಿಸಬೇಕಾಗುವ ಸನ್ನಿವೇಶ ಉಂಟಾಗಬಹುದು ಎಂದು ನಗರ ಪಂಚಾಯತ್ ಸದಸ್ಯರುಗಳು ಮತ್ತು ಸ್ಥಳೀಯರ ಅಕ್ಷೇಪಕ್ಕೆ ಕಾರಣವಾಗಿ ಗೊಂದಲಕ್ಕೆ ಕಾರಣವಾಯಿತು.

ಬಳಿಕ ಸ್ಥಳಕ್ಕೆ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ಮತ್ತು ಮೆಸ್ಕಾಂ A W E ಹರೀಶ್ ನಾಯ್ಕ ರವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಅಳವಡಿಸಿರುವ ಕಂಬವನ್ನು 15 ದಿನಗಳೊಳಗೆ ತೆರವು ಗೊಳಿಸಿ ಕೊಡುವ ಭರವಸೆ ನೀಡಿದ ಬಳಿಕ ವಿಷಯ ಸುಖಾಂತ್ಯಗೊಂಡಿತು.