ಗ್ರಾಮ ಪಂಚಾಯತ್ ಅರಿವು ಕೇಂದ್ರ ಅಜ್ಜಾವರದಲ್ಲಿ ಆ.12ರಂದು ಗ್ರಂಥಾಲಯ ಪಿತಾಮಹ ಎಸ್ ಆರ್. ರಂಗನಾಥ್ ರವರ ಜನ್ಮದಿನದವನ್ನು ಗ್ರಂಥಪಾಲಕರ ದಿನವನ್ನಾಗಿ ಆಚರಿಸಲಾಯಿತು.









ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಬೇಬಿ ಕಲ್ತಡ್ಕ ರವರು ದೀಪ ಬೆಳಗಿಸಿ, ಎಸ್. ಆರ್ ರಂಗನಾಥನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದರು. ನಂತರ ಲಾಂಛನ ಸಹಿತ ಅರಿವು ಕೇಂದ್ರದ ನಾಮ ಫಲಕ ವನ್ನು ಅನಾವರಣ ಗೊಳಿಸಿದರು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಹಿಳಾ ಸಾಹಿತಿಗಳಾದ ಶ್ರೀಮತಿ ವಿಮಲಾರುಣ ಗ್ರಂಥಪಾಲಕರ ಹಾಗೂ ಪುಸ್ತಕ ಬಳಕೆಯ ಮಹತ್ವದ ಬಗ್ಗೆ ತಿಳಿಸಿದರು. ಸ. ಹಿ. ಪ್ರಾಥಮಿಕ ಶಾಲೆ ಅಜ್ಜಾವರ ಇಲ್ಲಿನ ಮಕ್ಕಳು ಹಾಡನ್ನು ಹಾಡಿದರು.

ಈ ಸಂಧರ್ಭದಲ್ಲಿ ಪಂಚಾಯತ್ ಸದಸ್ಯರಾದ ಪ್ರಸಾದ್ ರೈ ಮೇನಾಲ, ಲೀಲಾ ಮನಮೋಹನ್ ಮುಡೂರು, ರವಿರಾಜ್ ಕರ್ಲಪ್ಪಾಡಿ ಮತ್ತು ಗ್ರಂಥಾಲಯ ಸಮಿತಿ ಸದಸ್ಯರಾದ ಶಶ್ಮಿ ಭಟ್, ಅಬ್ದುಲ್ ರಹಿಮಾನ್ ಶಿರಾಜೆ ನಿವೃತ್ತ ಪೊಲೀಸ್ ಅಧಿಕಾರಿ ಚಾಮಯ್ಯ ಎ, ವಿ ಆರ್ ಬ್ಲ್ಯೂ ಉಮ್ಮರ್ ಸ. ಹಿ. ಪ್ರಾ. ಶಾಲೆ ಅಜ್ಜಾವರ ವಿದ್ಯಾರ್ಥಿಗಳು ಮತ್ತು ಶಿಕ್ಷಕಿ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಗ್ರಂಥಾಲಯ ಮೇಲ್ವಿಚಾರಕರು ಕಾರ್ಯಕ್ರಮ ನಿರೂಪಿಸಿದರು.









