














ಅಜ್ಜಾವರ ಗ್ರಾಮದ ಕೆರೆಮೂಲೆ ದಿ.ವಾಸುದೇವ ಕೇಕುಣ್ಣಾಯ ರವರ ಪುತ್ರರಾದ ಕೆ.ವಿ.ಜಿ.ಐ.ಟಿ.ಐ ಕಾಲೇಜಿನ ಉಪನ್ಯಾಸಕ ಗಿರೀಶ ಕೇಕುಣ್ಣಾಯ ರವರು ಅ.22 ರಂದು ನಿಧನರಾಗಿದ್ದು ಮೃತರ ವೈಕುಂಠ ಸಮಾರಾಧನೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮವು ಸುಳ್ಯದ ಶ್ರೀ ರಾಘವೇಂದ್ರ ಮಠದ ಸಭಾಭವನದಲ್ಲಿ ನ.3 ರಂದು ನಡೆಯಿತು.

ಮೃತರ ಜೀವನಗಾಥೆಯ ಕುರಿತು ಜೂನಿಯರ್ ಕಾಲೇಜ್ ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ ರವರು ನುಡಿನಮನ ಸಲ್ಲಿಸಿದರು. ಬೃಂದಾವನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ ಹಾಗೂ ಟ್ರಸ್ಟ್ ಸದಸ್ಯರು ಹಾಗೂ
ಮೃತರ ತಾಯಿ ಶ್ರೀಮತಿ ಸತ್ಯಭಾಮ, ಪತ್ನಿ ಶ್ರೀಮತಿ ಶೋಭಾ, ಪುತ್ರ ಮಾ| ಆದಿತ್ಯ ಕೇಕುಣ್ಣಾಯ, ಪುತ್ರಿಯರಾದ ಕು. ಶ್ವೇತಾ,ಕು.ನಂದಿತಾ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಆಗಮಿಸಿದ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಸಮರ್ಪಿಸಿದರು.










