ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆ

0

ಎಲ್ಲಾ 12 ಸ್ಥಾನಗಳನ್ನು ಗೆಲ್ಲುವ ಮೂಲಕ ಸಂತೋಷ್ ಕುತ್ತಮೊಟ್ಟೆ ನೇತೃತ್ವದ ಬಿಜೆಪಿ ಬೆಂಬಲಿತರಿಂದ ಕ್ಲೀನ್ ಸ್ವೀಪ್

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ತೀವ್ರ ಮುಖಬಂಗ

ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರುಗಳ ಸ್ಥಾನಕ್ಕೆ ಡಿ.28ರಂದು ನಡೆದ ಚುನಾವಣೆಯಲ್ಲಿ ಎಲ್ಲಾ 12 ನಿರ್ದೇಶಕ ಸ್ಥಾನಗಳನ್ನು ಗೆಲ್ಲುವ ಮೂಲಕ ಸಂತೋಷ್ ಕುತ್ತಮೊಟ್ಟೆ ನೇತೃತ್ವದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಕ್ಲೀನ್ ಸ್ವೀಪ್ ಸಾಧಿಸಿದ್ದು, ಕಾಂಗ್ರೆಸ್ ಬೆಂಬಲಿತರಿಗೆ ತೀವ್ರ ಮುಖಬಂಗವಾಗಿದೆ.

ಇಲ್ಲಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಸಂತೋಷ್ ಕುತ್ತಮೊಟ್ಟೆ 681, ದಯಾನಂದ ಕುರುಂಜಿ 637 ಚಂದ್ರಶೇಖರ ಚೋಡಿಪಣೆ 633, ಶಿವಾನಂದ ಕುಕ್ಕುಂಬಳ 599, ಉದಯಕುಮಾರ್ ಉಳುವಾರು 564 ಮತ ಪಡೆದು ಗೆಲುವು ಸಾಧಿಸಿದ್ದಾರೆ.

, ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಶಾಂತ್ ಕಾಪಿಲ 162 ಮತ ಪಡೆದು ಗೆಲುವು ಸಾಧಿಸಿದ್ದಾರೆ.
ಸಾಲಗಾರರ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಬಿಜೆಪಿ ಬೆಂಬಲಿತರಾದ ಶ್ರೀಮತಿ ಶ್ರೀಲತಾ ದೇರಾಜೆ 684 ಶ್ರೀಮತಿ ಲೋಚನ ಕೊಳಲುಮೂಲೆ 623ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಬಿಜೆಪಿಯ ದಿನೇಶ್ ಅರಮನೆಗಯ 663 ಮತ, ಪರಿಶಿಷ್ಟ ಜಾತಿಯಿಂದ ಬಿಜೆಪಿಯ ಪದ್ಮಯ್ಯ ಅಡ್ಯಡ್ಕ 649
ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಬಿಜೆಪಿಯ ಚಂದ್ರಶೇಖರ ತೊಡಿಕಾನ 576 ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಬಿಜೆಪಿಯ ಡಾ. ಲಕ್ಷ್ಮೀಶ ಕಲ್ಲುಮುಟ್ಲು 702 ಮತ ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ಬೆಂಬಲಿತರಾಗಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜನಾರ್ದನ ಅಡ್ಕಬಳೆ 229, ಅಶ್ರಫ್ ಗುಂಡಿ 154,_, ತೇಜನಾಥ ಬನ 126, ಸಂತೋಷ್ ಕಿರ್ಲಾಯ 209, ಮಹಮ್ಮದ್ ಅಮೀರ್ 102 ಮತ ಪಡೆದು ಪರಾಭವಗೊಂಡಿದ್ದಾರೆ.

ಸಾಲಗಾರರಲ್ಲದ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ ಹೂವಯ್ಯ ಚೂರ್ನಾಡು 19 ಮತ ಪಡೆದು ಸೋಲು ಕಂಡಿದ್ದಾರೆ.
ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತರಾಗಿದ್ದ ಶ್ರೀಮತಿ ವಸಂತಿ ಬಾಳೆಕಜೆ 175 ಶ್ರೀಮತಿ ವನಿತ ಮೆತ್ತಡ್ಕ 209 ಮತ ಪಡೆದು ಪರಾಭವಗೊಂಡರು.

ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತರಾಗಿದ್ದ ರವೀಂದ್ರ ಪೂಜಾರಿ ತೊಡಿಕಾನ 275 ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ನ ತೀರ್ಥರಾಮ ಪರ್ನೋಜಿ 164 ಪರಿಶಿಷ್ಟ ಪಂಗಡ ಕ್ಷೇತ್ರದಿಂದ ನಾರಾಯಣ ನಾಯ್ಕ ಮೊಟ್ಟೆಂಗಾರ್ 197 ಮತ , ಪರಿಶಿಷ್ಟ ಜಾತಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಚೌಕಾರು 205ಮತ ಪಡೆದು ತೀವ್ರ ಮುಖಬಂಗಕ್ಕೊಳಗಾದರು.

ಈ ಮೂಲಕ ಸಂತೋಷ್ ಕುತ್ತಮೊಟ್ಟೆ ನೇತೃತ್ವದ ಬಿಜೆಪಿ ಬೆಂಬಲಿತರು ಮತ್ತೊಂದು ಅವಧಿಗೆ ಸಹಕಾರಿ ಸಂಘದ ಆಡಳಿತ ಚುಕ್ಕಾಣಿ ಪಡೆದುಕೊಂಡಿದ್ದಾರೆ.
ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.