














ಸಂಪಾಜೆ ಶ್ರೀ ಶಿರಾಡಿ ರಾಜನ್ ದೈವಸ್ಥಾನ ಜೀರ್ಣೋದ್ಧಾರ ಅoಗವಾಗಿ ಪೂರ್ವಭಾವಿ ಸಭೆ ಹಾಗೂ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳ ರಚನೆಯು ಶಿರಾಡಿ ರಾಜನ್ ದೈವಸ್ಥಾನದ ಅಧ್ಯಕ್ಷ ರಾಮಕೃಷ್ಣ ಕುಕ್ಕಂದೂರು ಅಧ್ಯಕ್ಷತೆಯಲ್ಲಿ ಫೆ.2 ರಂದು ನಡೆಯಿತು.

ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ರೋಹಿತ್ ಕುಕ್ಕೇಟಿ ಒಂಟಿನೇಮದ ಲೆಕ್ಕ ಪತ್ರ ವರದಿಮಂಡಿಸಿದರು. ನಂತರ ಜೀರ್ಣೋದ್ಧಾರದ ಸಮಿತಿಯನ್ನು ರಚಿಸಲಾಯಿತು. ಜೀರ್ಣೋದ್ಧಾರದ ಗೌರವಾಧ್ಯಕ್ಷರಾಗಿ ಶಿವರಾಮ್ ಅಂಬೆಕಲ್ಲು, ಅಧ್ಯಕ್ಷರಾಗಿ ಕೇಶವ ಚೌಟಾಜೆ, ಉಪಾಧ್ಯಕ್ಷರಾಗಿ ವಿಜಯ್ ಕುಮಾರ್ ಕನ್ಯಾನ, ಕಾರ್ಯದರ್ಶಿಯಾಗಿ ನಾರಾಯಣ ಕುಕ್ಕೇಟಿ, ಜೊತೆ ಕಾರ್ಯದರ್ಶಿ ಯಾಗಿ ಕೃಷ್ಣ ಬಿ. ಕೆ,ಖಜಾಂಜಿಯಾಗಿ ಸೃಜನ್ ಸುಳ್ಯಕೋಡಿ ಮತ್ತು 15 ಜನ ಸದಸ್ಯರು ಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮೊಕ್ತೇಸರರು, ಮನೆತನದವರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಖಜಾಂಜಿ
ಶ್ರೀಪಾದ ಹೊಸಮನೆ ರವರು ಸರ್ವರನ್ನು ಸ್ವಾಗತಿಸಿದರು.










