ಅಜ್ಜಾವರ ಗ್ರಾಮದ ದೊಡ್ಡೇರಿ ಕಿರಿಯ ಪ್ರಾಥಮಿಕ ಶಾಲೆಯ ನವೀಕೃತ ಕಟ್ಟಡದ ಉದ್ಘಾಟನೆ ಫೆ.3ರಂದು ನಡೆಯಿತು.

ಶಾಸಕಿ ಭಾಗೀರಥಿ ಮುರುಳ್ಯ ಕಟ್ಟಡವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಾನಕಿ ಕಾಟಿಪಳ್ಳರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.















ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಸದಸ್ಯರುಗಳಾದ ಸತ್ಯವತಿ ಬಸವನಪಾದೆ, ರತ್ನಾವತಿ, ಚಂದ್ರಶೇಖರ ಕೋಣಗುಂಡಿ, ಚಂದ್ರಶೇಖರ ಡಿ.ಕೆ., ವಾಸುದೇವ ನಾಯ್ಕ, ಅಂಗನವಾಡಿ ಕಾರ್ಯಕರ್ತೆ ಉಷಾ, ಶಿಕ್ಷಣ ಸಂಯೋಜಕರಾದ ಧನಲಕ್ಷ್ಮೀ ಕುದ್ಪಾಜೆ, ರೇವತಿ ರಾಧಾಕೃಷ್ಣ, ಕಲಾವತಿ ದೊಡ್ಡೇರಿ ಮೊದಲಾದವರು ಇದ್ದರು.

ಎಸ್.ಡಿ.ಎಂ.ಸಿ. ಅಧ್ಯಕ್ಷ ದಯಾನಂದ ಡಿ.ಕೆ. ಪ್ರಾಸ್ತಾವಿಕ ಮಾತನಾಡಿದರು.
ಎಸ್.ಡಿ.ಎಂ.ಸಿ.ಉಪಾಧ್ಯಕ್ಷರು, ಸದಸ್ಯರು, ಪೋಷಕರು ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಸ್ಥಳೀಯರು ಭಾಗವಹಿಸಿದ್ದರು. ಜಗದೀಶ್ ದೊಡ್ಡೇರಿ ಸ್ವಾಗತಿಸಿದರು. ಮುಖ್ಯಗುರುಗಳಾದ ಕೃಷ್ಣಾನಂತ ಶರಳಾಯ ವಂದಿಸಿದರು. ಅತಿಥಿ ಶಿಕ್ಷಕ ಭುವನ್ ಕೆ ಕಾರ್ಯಕ್ರಮ ನಿರೂಪಿಸಿದರು.










