ಶ್ರೀ ರಾಮಕೃಷ್ಣ ಕ್ರೆಡಿಟ್‌ ಕೋ-ಓಪರೇಟಿವ್ ಸೊಸೈಟಿ ಆಡಳಿತ ಮಂಡಳಿ ಚುನಾವಣೆ

0


ಪ್ರತಿಷ್ಠಿತ ಕ್ರೆಡಿಟ್ ಸಹಕಾರ ಸಂಸ್ಥೆಗಳಲ್ಲೊಂದಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ರಾಮಕೃಷ್ಣ ಕ್ರೆಡಿಟ್‌ ಕೋ-ಓಪರೇಟಿವ್ ಸೊಸೈಟಿಯ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ಚುನಾವಣೆಯು ಫೆಬ್ರವರಿ 2 ರಂದು ಶ್ರೀ ರಾಮಕೃಷ್ಣ ವಿದ್ಯಾಲಯ, ಬಂಟ್ಸ್‌ಹಾಸ್ಟೆಲ್, ಮಂಗಳೂರಿನಲ್ಲಿ ಜರಗಿತು.

ಚುನಾವಣೆಯಲ್ಲಿ ಹಾಲಿ ಅಧ್ಯಕ್ಷರಾದ ಕೆ. ಜೈರಾಜ್ ಬಿ. ರೈಯವರು ಸೇರಿದಂತೆ ಅವರ ನೇತೃತ್ವದ ಸಾಮಾನ್ಯ ಸ್ಥಾನದ ಎಲ್ಲಾ 13 ಅಭ್ಯರ್ಥಿಗಳಾದ ಸರ್ವಶ್ರೀ ಕೆ. ಸೀತಾರಾಮ ರೈ ಸವಣೂರು, ಡಾ| ಕೆ. ಸುಭಾಶ್ಚಂದ್ರ ಶೆಟ್ಟಿ, ಪಿ. ಶಿವರಾಮ ಅಡ್ಯಂತಾಯ, ಸಿಎ ಎಚ್. ಆರ್. ಶೆಟ್ಟಿ, ವಿಠಲ ಪಿ. ಶೆಟ್ಟಿ, ಯಂ. ರಾಮಯ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ರವೀಂದ್ರನಾಥ ಜಿ. ಹೆಗ್ಡೆ, ಕುಂಬ್ರ ದಯಾಕರ್ ಆಳ್ವ, ಬೆಳ್ಳಿಪ್ಪಾಡಿ ಪ್ರಸಾದ್‌ಕೌಶಲ್ ಶೆಟ್ಟಿ, ಅರಿಯಡ್ಕಚಿಕ್ಕಪ್ಪ ನಾಕ್ ಮತ್ತುಡಾ. ಬಿ. ಸಂಜೀವರೈ ಯವರುಗಳು ಬಹುಮತದಿಂದ ಗೆಲುವು ಸಾಧಿಸಿದ್ದಾರೆ.

ಕೆ. ಜೈರಾಜ್ ಬಿ. ರೈಯವರ ತಂಡದ ಅಭ್ಯರ್ಥಿಗಳಾದ ಪಿ. ಬಿ. ದಿವಾಕರರೈಯವರು ಹಿಂದುಳಿದ ವರ್ಗ’ಬಿ’ ಕ್ಷೇತ್ರದಲ್ಲಿ ಹಾಗೂ ಶ್ರೀಮತಿ ಲಕ್ಷ್ಮಿಜಯಪಾಲ ಶೆಟ್ಟಿ ಮತ್ತು ಶ್ರೀಮತಿ ರತ್ನಕಾಂತಿ ಶೆಟ್ಟಿ ಮಹಿಳಾ ಕ್ಷೇತ್ರದಲ್ಲಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ದ. ಕ. ಜಿಲ್ಲಾ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಅಧಿಕಾರಿಗಳಾದ ಸಂಘದ ಚುನಾವಣಾ ರಿಟರ್ನಿಂಗ್‌ ಅಧಿಕಾರಿ ಸಿ. ಆನಂದ್ ಹಾಗೂ ಸಹಾಯಕ ಚುನಾವಣಾ ರಿಟರ್ನಿಂಗ್‌ ಅಧಿಕಾರಿ ನವೀನ್ ಕುಮಾರ್ ಎಂ.ಎಸ್. ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.