ಸ್ನೇಹದಲ್ಲಿ ರಥಸಪ್ತಮಿ, ಸಾಮೂಹಿಕ ಯೋಗಾಸನ

0

ಸೂರ್ಯದೇವರ ಹುಟ್ಟುಹಬ್ಬವೆಂದು ಆಚರಿಸಲ್ಪಡುವ ರಥಸಪ್ತಮಿ ದಿನಾಚರಣೆಯನ್ನು ಸ್ನೇಹ ಶಾಲೆಯ ಸೂರ್ಯಾಲಯದಲ್ಲಿ ಫೆಬ್ರವರಿ 4 ರಂದು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರ ನಿರ್ದೇಶನದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಾಮೂಹಿಕ ಸೂರ್ಯನಮಸ್ಕಾರ ಮಾಡಿದರು. ಜ್ಞಾನದ ಕಣ್ಣಿನಂತಿರುವ ಸೂರ್ಯನು ಪ್ರಕೃತಿಯ ಪೋಷಕನಾಗಿದ್ದಾನೆಂದು
ಡಾ. ದಾಮ್ಲೆಯವರು ಹೇಳಿದರು.