ಕೊಲ್ಲಮೊಗ್ರ: ಕೆ.ವಿ.ಜಿ.ಅನುದಾನಿತ ಪ್ರೌಢ ಶಾಲೆಯ ತರಬೇತಿ ಕಾರ್ಯಗಾರ

0

ಜೇಸಿ ಐ ಪಂಜ ಪಂಚಶ್ರೀ ಪ್ರಾಂತ್ಯ ಎಫ್ ವಲಯ 15 ಮುಡೂರು ಇನ್ಫೋಟೆಕ್ ಪಂಜ ಇದರ ಆಶ್ರಯದಲ್ಲಿ ದಿಕ್ಸೂಚಿ ಸರಣಿ ತರಬೇತಿ ಕಾರ್ಯಗಾರ ನಲಿವಿನ ಓದು ಗೆಲುವಿನ ಕಡೆಗೆ ಫೆ.6 ರಂದು ಕೆ. ವಿ.ಜಿ.ಅನುದಾನಿತ ಪ್ರೌಢಶಾಲೆ ಕೊಲ್ಲಮೊಗ್ರದಲ್ಲಿ ನಡೆಯಿತು. ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಜೇಸಿ ಎಚ್ ಜೆ ಎಫ್ ವಾಚಣ್ಣ ಕೆರೆಮೂಲೆ ವಹಿಸಿಕೊಂಡರು. ಉದ್ಘಾಟನೆಯನ್ನು ನಿವೃತ್ತ ಪ್ರಾಂಶುಪಾಲ ಪ್ರಭಾಕರ ಕಿರಿಭಾಗ ನೆರವೇರಿಸಿದರು.

ಅತಿಥಿಗಳಾಗಿ ಕೆವಿಜಿ ಅನುದಾನಿತ ಪ್ರೌಢಶಾಲೆಯ ಎಸ್.ಬಿ.ಸಿ.ಅಧ್ಯಕ್ಷ ಕಮಲಾಕ್ಷ ಮುಳ್ಳುಬಾಗಿಲು , ಸಹಶಿಕ್ಷಕ ವೆಂಕಟರಮಣ ಕೆ.ಕೆ.ಸಹಶಿಕ್ಷಕ ವಹಿಸಿದ್ದರು. ತರಬೇತುದಾರರಾಗಿ ವಲಯ ತರಬೇತಿದಾರರು ಜೇಸಿ ಐ ಭಾರತ, ಪಂಎಮುಡೂರು ಇನ್ಫೋಟೆಕ್ ಮಾಲಕ ಜೆಎಫ್ಎಂ ಸವಿತಾ ಮುಡೂರು ,ಕಾರ್ಯದರ್ಶಿ ಜೇಸಿ ಎಚ್ ಜಿ ಎಫ್ ಅಶ್ವಥ್ ಬಾಬ್ಲುಬೆಟ್ಟು,ಕಾರ್ಯಕ್ರಮ ನಿರ್ದೇಶಕರು ಜೆಎಫ್ಎಂ ಮದನ್ ಕೊಲ್ಯ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಜೇಸಿ ಪ್ರವೀಣ್ ಕುಂಜತ್ತಾಡಿ ವೇದಿಕೆಗೆ ಆಹ್ವಾನಿಸಿದರು.ಜೇಸಿ ವಾಣಿಯನ್ನು ಜೇಸಿ ಮದನ್ ಕೊಲ್ಯ ವಾಚಿಸಿದರು.

ಅತಿಥಿಗಳ ಮತ್ತು ತರಬೇತುದಾರರ ಪರಿಚಯವನ್ನು ಜೇಸಿ ಪ್ರವೀಣ್ ಕುಂಜತ್ತಾಡಿ , ಜೇಸಿ ಅಶ್ವಥ್ ಬಾಬ್ಲುಬೆಟ್ಟು ನೆರವೇರಿಸಿದರು.ಜೇಸಿ ಅಶ್ವಥ್ ಬಾಬ್ಲುಬೆಟ್ಟು ಕಾರ್ಯದರ್ಶಿ ವಂದಿಸಿದರು.ಕಾರ್ಯಕ್ರಮದಲ್ಲಿ ಜೇಸಿ ಪಂಜ ಪಂಚಶ್ರೀಯ ಸದಸ್ಯರು, ಶಾಲಾ ಶಿಕ್ಷಕ ವೃಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದರು.