ಬಹಿರಂಗ ಚರ್ಚೆಗೆ ಬರಲಿ : ಮಹೇಶ್ ಕುಮಾರ್ ಕರಿಕ್ಕಳ
ಪಂಜ ಜಾತ್ರಾ ಮಹೋತ್ಸವದಲ್ಲಿ ತಾತ್ಕಾಲಿಕ ಸಂತೆ ವ್ಯಾಪಾರಿಗಳಿಂದ ಗ್ರಾ.ಪಂ. ಕರ ವಸೂಲಿ ವಿಚಾರ, ಪೊಲೀಸ್ ದೂರು ಮತ್ತಿತರ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಯಿಸಿರುವ ವ್ಯವಸ್ಥಾಪನಾ ಸಮಿತಿ ಗೌರವ ಸಲಹೆಗಾರರೂ , ಕಲ್ಮಡ್ಕ ಗ್ರಾ.ಪಂ.ಅಧ್ಯಕ್ಷರೂ ಆಗಿರುವ ಮಹೇಶ್ ಕುಮಾರ್ ಕರಿಕ್ಕಳರವರು , ಈ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ.















ದೇಗುಲದ ಅಭಿವೃದ್ಧಿ ಹಾಗೂ ಜಾತ್ರ ವ್ಯವಸ್ಥೆಗೆ ಪಂಚಾಯತ್ ನವರ ಕೊಡುಗೆ ಏನು ? ಬಲಾತ್ಕಾರವಾಗಿ ಕರ ವಸೂಲಿಗೆ ಅವರಿಗೆ ಯಾವ ನೈತಿಕತೆ ಇದೆ ? ಈ ಕುರಿತು ಬಹಿರಂಗ ಚರ್ಚೆಗೆ ಬರಲಿ. ಕಾನೂನು ಪುಸ್ತಕ ಹಿಡಿದು ನಾನೂ ಬರುತ್ತೇನೆ. ಗ್ರಾ.ಪಂ.ಅಧ್ಯಕ್ಷನಾಗಿ ನನಗೆ ಈ ಮಾಹಿತಿಗಳೆಲ್ಲ ಇದೆ ಎಂದರು.
ಚರ್ಚೆಗೆ ಬರುವುದಿದ್ದರೆ ಎದುರು ಎದುರು ಬರಬೇಕು. ಹಿಂದಿನಿಂದ ಮಾತನಾಡುವುದಲ್ಲ. ನಾನಿಲ್ಲದಿರುವಾಗ ಅಧ್ಯಕ್ಷರೊಂದಿಗೆ ಮಾತನಾಡಿ ಹೋಗುವುದೂ ಅಲ್ಲ ಎಂದು ಮಹೇಶ್ ಕುಮಾರ್ ಹೇಳಿದರು.










