














ಮಾರ್ಚ್ 4, 5, 6ರಂದು ನಡೆಯುವ ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವಸ್ಥಾನದ ಕಾಲಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಫೆ.8ರಂದು ಶನಿವಾರ ಬೆಳಗ್ಗೆ 8 ಗಂಟೆಗೆ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಿ.ಎಸ್.ಗಂಗಾಧರ್ ತಿಳಿಸಿದ್ದಾರೆ. ನಂತರ 8.30ಕ್ಕೆ ದೇವಸ್ಥಾನದ ಸಭಾಂಗಣದಲ್ಲಿ ಜಾತ್ರೋತ್ಸವ ಸಮಿತಿಯ ಸಭೆ ನಡೆಯಲಿದೆ. ಆದುದರಿಂದ ಎಲ್ಲ ಉಪಸಮಿತಿಗಳ ಪದಾಧಿಕಾರಿಗಳು, ಬೈಲುವಾರು ಸಮಿತಿಯವರು ಭಾಗವಹಿಸಬೇಕಾಗಿ ಅವರು ವಿನಂತಿಸಿದ್ದಾರೆ.










