ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ ಮಾರ್ಚ್ 4ರಿಂದ ಆರಂಭಗೊಳ್ಳಲಿದ್ದು, ಇದರ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ ಫೆ.8ರಂದು ದೇವಸ್ಥಾನದಲ್ಲಿ ನಡೆಯಿತು.









ಬೆಳಗ್ಗೆ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಿ.ಎಸ್. ಗಂಗಾಧರ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜತ್ತಪ್ಪ ಗೌಡ ಕುತ್ಯಾಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಎಂ.ಹೆಚ್., ಜಾತ್ರೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಯವರ ಮುಂದಾಳತ್ವದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಬಳಿಕ ಆಮಂತ್ರಣ ಇಟ್ಟು ಪೂಜೆ ಸಲ್ಲಿಸಲಾಯಿತು. ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಗಳಾದ ಶಿವರಾಮ ಎಂ.ಪಿ., ದಿವಾಕರ ಶೆಟ್ಟಿಹಿತ್ಲು, ಗಂಗಾಧರ ನಾಯರ್, ಸರೋಜಿನಿ ಶೆಟ್ಟಿ, ನಾರಾಯಣ ಎ, ಸುಮಲತಾ, ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ
ರತ್ನಾಕರ ಗೌಡ ಬಳ್ಳಡ್ಕ,
ರಾಘವ ರಾವ್, ಶಶಿಧರ್ ನಾಯರ್, ಗಿರಿಧರ್ ದಾಸ್, ಶೈಲಾ ದಿವಾಕರ, ವಿಜಯಕುಮಾರ್, ಶಾರದಾ ಶೆಟ್ಟಿ, ರಮೇಶ್ ಪೂಜಾರಿ, ರಾಧಾಕೃಷ್ಣ ದಾಸ್, ಪುನೀತ್, ಶಿವಾನಂದ ಶೆಟ್ಟಿ, ಬಾಲಕೃಷ್ಣ ನಾಯರ್,
ಚಿತ್ರಕುಮಾರಿ, ಸಂದೀಪ್ ಮದುವೆಗದ್ದೆ, ಅರ್ಚಕರಾದ ಮದ್ವರಾಜ್ ಭಟ್, ಕೆ.ವೆಂಕಟ್ರಮಣ ಭಟ್ ಉಪಸ್ಥಿರಿದ್ದರು










