ಏಪ್ರಿಲ್ 11 ರಿಂದ 13 ರ ತನಕ ಮೇದಿನಡ್ಕ ಶ್ರೀ ಮುತ್ತು ಮಾರಿಯಮ್ಮ ದೇವಿಗೆ ಜಾತ್ರಾ ಸಂಭ್ರಮ

0

ಅಜ್ಜಾವರ ಗ್ರಾಮದ ಮೇದಿನಡ್ಕ ಶ್ರೀ ಮುತ್ತು ಮಾರಿಯಮ್ಮದೇವಿಯ ವರ್ಷವದಿ ಜಾತ್ರೋತ್ಸವ ಏಪ್ರಿಲ್ 11 ಶುಕ್ರವಾರದಿಂದ 13 ಭಾನುವಾರದ ತನಕ ವಿವಿಧ ವೈದಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

ದೇವಸ್ಥಾನದ ವಠಾರದಲ್ಲಿ ನಡೆದ ಸ್ಥಳೀಯ ಭಕ್ತಾದಿಗಳ ಸಭೆಯಲ್ಲಿ ಆಡಳಿತ ಸಮಿತಿಯು ದಿನಾಂಕದ ನಿರ್ಣಯ ಕೈಗೊಂಡಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರಾದ ನಾಚಿ ಮುತ್ತು, ಉಪಾಧ್ಯಕ್ಷರಾದ ವಿಜಯ್, ಪ್ರಧಾನ ಕಾರ್ಯದರ್ಶಿ ರಮೇಶ್ ಮೇದಿನಡ್ಕ, ಗೌರವಾಧ್ಯಕ್ಷರಾದ ದಯಾಳ್, ಖಜಾಂಚಿ ಮಿಥುನ್, ದೇವಸ್ಥಾನದ ಅರ್ಚಕರಾದ ಯೋಗರಾಜ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.


ಕು, ಸಿಂಚನ, ಸಂಜುಶ್ರೀ ಪ್ರಾರ್ಥಿಸಿ, ಗೌರವಧ್ಯಕ್ಷರಾದ ದಯಾಳ್ ಸ್ವಾಗತಿಸಿ , ರಮೇಶ್ ಮೇದಿನಡ್ಕ ಧನ್ಯವಾದ ಸಮರ್ಪಿಸಿದರು.
ಮಹೀಳಾ ಸಮಿತಿ ಸದಸ್ಯರಾದ ಶ್ರೀಮತಿ ಶಿವಪಾಕ್ಯಂ, ರೇಖಾ ಜಾತ್ರೋತ್ಸವ ಸಮಿತಿ ರಚನೆಗೆ ಸಹಕರಿಸಿದರು.