ಭಜನೆ, ಸಂಗೀತ, ಕೊಳಲುವಾದನ, ಯಕ್ಷಗಾನ ನೃತ್ಯದ ಮೂಲಕ ಶ್ರೀ ದೇವರಿಗೆ ಅಷ್ಟಾವಧಾನ ಸೇವೆ ಅರ್ಪಣೆ – ಸಭಾ ಕಾರ್ಯಕ್ರಮ – ಹಿರಿಯ ಕಲಾವಿದರಿಗೆ ಗೌರವ ಸನ್ಮಾನ
ರೆಂಜಾಳ ಜಗನ್ಮೋಹನ ರೈ ಮತ್ತು ಮನೆಯವರಿಂದ ಆಯೋಜನೆ

ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಇವರಿಂದ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದ ಪ್ರೊ. ಪವನ್ ಕಿರಣ್ ಕೆರೆ ವಿರಚಿತ ಅಯೋಧ್ಯಾದೀಪ ಎಂಬ ಆಖ್ಯಾನ ವನ್ನು ರೆಂಜಾಳ ಶ್ರೀಮತಿ ಪ್ರೇಮ ಜೆ. ರೈ ಮತ್ತು ಜಗನ್ಮೋಹನ ರೈ ಕೆ. ಇವರ ಸೇವಾ ಬಯಲಾಟವಾಗಿ ಪಾವಂಜೆ ಮೇಳದವರಿಂದ ಮರ್ಕಂಜದ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ನಿನ್ನೆ ವಿಜೃಂಭಣೆಯಿಂದ ನಡೆಯಿತು.
ಸಂಜೆ ಶ್ರೀ ದೇವರಿಗೆ ಸಂಕ್ರಮಣದ ಪ್ರಯುಕ್ತ ಸಂಗೀತ, ಭಜನೆ, ಮಂತ್ರಪಠಣ, ಕೊಳಲು ವಾದನ ಮತ್ತಿತರ ಅಷ್ಟಾವಧಾನ ಸೇವೆ ನಡೆಯಿತು. ಬಳಿಕ ಚೌಕಿ ಪೂಜೆ ನಡೆದು ಯಕ್ಷಗಾನ ಆರಂಭಗೊಂಡಿತು.
ಇದೇ ಸಂದರ್ಭದಲ್ಲಿ ಯಕ್ಷಗಾನ ಮೇಳಗಳಲ್ಲಿ ತಿರುಗಾಟ ನಡೆಸಿರುವ ಯಕ್ಷಗಾನ ಹಿರಿಯ ಕಲಾವಿದರಾದ ಬೊಮ್ಮರು ಐತಪ್ಪ ಗೌಡ ಮತ್ತು ರೆಂಜಾಳ ರಾಮಕೃಷ್ಣ ರಾವ್ ರವರಿಗೆ ರೆಂಜಾಳ ಯಕ್ಷೋಪಾಸಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯ ಇದರ ಅಧ್ಯಕ್ಷರಾದ ಚಂದ್ರಶೇಖರ ದಾಮ್ಲೆ, ಯಕ್ಷಧ್ರುವ ಪಟ್ಲ ಪೌಂಡೆಷನ್ ಟ್ರಸ್ಟ್ ಮಂಗಳೂರು ಇದರ ಸ್ಥಾಪಕಾಧ್ಯಕ್ಷ ಯಕ್ಷಧ್ರುವ ಸತೀಶ್ ಶೆಟ್ಟಿ ಪಟ್ಲ, ಜೈನ ಪದವಿ ಪೂರ್ವ ಕಾಲೇಜು ಮೂಡಬಿದಿರೆ ಇಲ್ಲಿಯ ಪ್ರಾಂಶುಪಾಲರಾದ ಡಾ| ಪ್ರಭಾತ್ ಬಲ್ನಾಡು ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.





ರೆಂಜಾಳ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ರೆಂಜಾಳ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಪುಟ್ಟಣ್ಣ ಗೌಡ ಬಾಣೂರು, ಮರ್ಕಂಜ ಪಂಚಸ್ಥಾಪನೆಗಳ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವಧ್ಯಕ್ಷ ರಾಘವ ಕಂಜಿಪಿಲಿ ಗೌರವ ಉಪಸ್ಥಿತರಿದ್ದರು.
ಶ್ರೀ ಶಶೀಂದ್ರ ಕುಮಾರ್ ಆಡಳಿತ ಮೊಕ್ತೇಸರರು ಶ್ರೀ ಕ್ಷೇತ್ರ ಪಾವಂಜೆ, ಶ್ರೀ ಸುಧಾಕರ ಆಚಾರ್ಯ ಉಡುಪಿ, ಯಕ್ಷಗಾನ ಸಂಘಟಕರು, ಡಾ| ಹರೀಶ ಜೋಷಿ ಅಧ್ಯಕ್ಷರು ವಿಟ್ಲ ಜೋಷಿ ಪ್ರತಿಷ್ಠಾನ, ಶ್ರೀ ತ್ರಿಲೋಚನ ಶಾಸ್ತ್ರಿ ಯಕ್ಷಗಾನ ಸಂಘಟಕರು ವಿಶೇಷ ಆಹ್ವಾನಿತರಾಗಿದ್ದರು.
ಇದೆ ಸಂದರ್ಭ ಯಕ್ಷಗಾನ ಸಂಘಟನೆಗಾಗಿ ದುಡಿದ, ಯಕ್ಷಗಾನ ಕಲಾವಿದ ಜಗನ್ಮೋಹನ ರೈ ದಂಪತಿಗಳನ್ನು ಚಂದ್ರಶೇಖರ ದಾಮ್ಲೆ ಯವರು ತಮ್ಮ ವೈಯಕ್ತಿಕ ನೆಲೆಯಲ್ಲಿ ಸನ್ಮಾನಿಸಿದರು.





ಹರ್ಷಿತ್ ಮಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.
ದೇವಾಲಯದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಬಳ್ಳಕಾನ, ಅನ್ನಪೂರ್ಣ ಸಮಿತಿ ಅಧ್ಯಕ್ಷರಾದ ಚಿನ್ನಪ್ಪ ಗೌಡ ಬೇರಿಕೆ, ಶಾಸ್ತಾವು ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಬೇರಿಕೆ, ಭಜನಾ ಮಂಡಳಿ ಅಧ್ಯಕ್ಷರಾದ ರಾಜೇಶ್ ರೆಂಜಾಳ, ಚಾಮುಂಡೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ಜಯಂತ ಚಾಕೋಟೆಮೂಲೆ, ಪ್ರಮುಖರಾದ ಕುಮಾರಸ್ವಾಮಿ ರೆಂಜಾಳ, ಮಹಾಬಲ ಕಟ್ಟಕ್ಕೋಡಿ, ಸತೀಶ್ ರಾವ್ ದಾಸರಬೈಲ್, ದಾಮೋದರ ಪಾಟಲಿ ಮಿತ್ತಡ್ಕ ಮತ್ತಿತರರು, ದೇವಾಲಯದ ವಿವಿಧ ಸಮಿತಿಗಳ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ದುಡಿದರು.
ಒಂದೂವರೆ ಸಾವಿರದಷ್ಟು ಊರ ಪರವೂರ ಕಲಾಭಿಮಾನಿಗಳು ಯಕ್ಷಗಾನ ವೀಕ್ಷಿಸಿದರು. ರಾತ್ರಿ ಅನ್ನಸಂತರ್ಪಣೆ ನಡೆಯಿತು.

ಯಕ್ಷಗಾನವನ್ನು ಸುದ್ದಿ ಯೂ ಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು. 15 ಸಾವಿರಕ್ಕೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ.












