ಕುರುಂಜಿಗುಡ್ಡೆ ರಸ್ತೆ ಧೂಳು ಮಯ


ಕುಡಿಯುವ ನೀರು ಸರಬರಾಜಿಗಾಗಿ ಪೈಪ್ ಅಳವಡಿಕೆ ಕಾಮಗಾರಿಗಾಗಿ ಕುರುಂಜಿಗುಡ್ಡೆ ರಸ್ತೆಯನ್ನು ಅಗೆದು ಪೈಪ್ ಅಳವಡಿಕೆ ಮಾಡಲಾಗಿ ದಿನ ಕಳೆಯುತ್ತಾ ಬಂದರೂ ರಸ್ತೆಯನ್ನು ಮಾತ್ರ ಇನ್ನೂ ಸರಿ ಪಡಿಸದಿರುವ ಪರಿಣಾಮ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಪರಿಸರವೆಲ್ಲ ಧೂಳು ಮಯವಾಗಿದೆ.


ಸುಳ್ಯದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಸರಕಾರದಿಂದ ಅನುದಾನ ಮಂಜೂರುಗೊಂಡು ವರ್ಷದ ಹಿಂದೆ ಕಾಮಗಾರಿ ಆರಂಭಗೊಂಡಿದೆ. ಕಳೆದ ಕೆಲ ದಿನಗಳಿಂದ ಕುರುಂಜಿಗುಡ್ಡೆಯಲ್ಲಿ ರಸ್ತೆ ಅಗೆದು ಪೈಪ್ ಅಳವಡಿಕೆ ಕಾಮಗಾರಿ ಆರಂಭಗೊಂಡಿದೆ. ಕಾಂಕ್ರೀಟ್ ರಸ್ತೆಯನ್ನು ಮಧ್ಯಭಾಗದಿಂದ ತುಂಡರಿಸಿ ಪೈಪ್ ಅಳವಡಿಕೆ ಮಾಡಲಾಗಿದೆ.
















ಆದರೆ ಕೋರ್ಟ್ ಬಳಿಯಿಂದ ಕುರುಂಜಿಗುಡ್ಡೆ ಗೆ ಹೋಗುವ ರಸ್ತೆಯ ಕಾಮಗಾರಿ ಮುಗಿದಿದ್ದರೂ ರಸ್ತೆ ಸರಿಯಾಗಿ ಮುಚ್ಚಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿಲ್ಲ. ರಸ್ತೆಯಲ್ಲ ಧೂಳು ಮಯವಾಗಿ ಪರಿಸರದ ಮನೆಗಳಿಗೂ ತೊಂದರೆಯಾಗಿದೆ.
ನೀರು ಸರಬರಾಜಿನ ಹಳೆ ಪೈಪ್ ಗಳು ಅಲ್ಲಲ್ಲಿ ತುಂಡರಿಸಲ್ಪಟ್ಟು ನೀರು ಪೋಲಾಗುತ್ತಿದೆ.










