ಬೇಡಿಕೆ ಈಡೇರಿಕೆಯ ಭರವಸೆ

0

ಮುಕ್ತಾಯಗೊಂಡ ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ

ಸೋಮವಾರದಿಂದ ಕರ್ತವ್ಯಕ್ಕೆ ಹಾಜರು

ಕಳೆದ 1 ವಾರದಿಂದ ವಿವಿಧ ಬೇಡಿಕೆಯನ್ನು‌ ಮುಂದಿರಿಸಿಕೊಂಡು ರಾಜ್ಯಾದ್ಯಂತ ಗ್ರಾಮ ಆಡಳಿತಾಧಿಕಾರಿಗಳು ಕೈಗೊಂಡಿದ್ದ ಮುಷ್ಕರ ಕೊನೆಗೊಂಡಿರುವುದಾಗಿ ತಿಳಿದುಬಂದಿದೆ.

ಸರಕಾರ ಬೇಡಿಕೆ ಈಡೇರಿಕೆಯ ಭರವಸೆ ನೀಡಿರುವುದರಿಂದ ಮುಷ್ಕರ ಕೈ ಬಿಡಲಾಗಿದ್ದು ಫೆ.24 ಸೋಮವಾರ ದಿಂದ ನಾವೆಲ್ಲರೂ ಕರ್ತವ್ಯಕ್ಕೆ ಹಾಜರಾಗುತ್ತಿದ್ದೇವೆ ಎಂದು ಸುಳ್ಯ ತಾಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಗೌರವಾಧ್ಯಕ್ಷ ತಿಪ್ಪೇಶಪ್ಪ ತಿಳಿಸಿದ್ದಾರೆ.