ಸರಕಾರದ ಎ ಖಾತಾ ಬಿ ಖಾತಾ ಜನ ಸ್ನೇಹಿ ಯೋಜನೆ; ಸುಳ್ಯ ನಗರದ ಜನರಿಗೆ ವರದಾನ

0

ಕಾಂಗ್ರೆಸ್ ನಾಯಕರು ಹಾಗೂ ನ.ಪಂ.ಕಾಂಗ್ರೆಸ್ ಸದಸ್ಯರ ಅಭಿಮತ

ಕರ್ನಾಟಕ ಸರಕಾರ ಜಾರಿಗೆ ತಂದಿರುವ ಎ ಖಾತಾ ಬಿ ಖಾತಾ ಯೋಜನೆ ಜನ ಸ್ನೇಹಿ ಯೋಜನೆಯಾಗಿದ್ದು ಸುಳ್ಯ ನಗರದ ಜನರಿಗೆ ತುಂಬ ಉಪಕಾರವಾಗಲಿದೆ ಎಂದು
ಕಾಂಗ್ರೆಸ್ ನಾಯಕರು ಹಾಗೂ ಸುಳ್ಯ ನ.ಪಂ.ಕಾಂಗ್ರೆಸ್ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್, ಸುಳ್ಯ ನಗರ ಪಂಚಾಯತ್ ಸದಸ್ಯರಾದ ಕೆ.ಎಸ್.ಉಮ್ಮರ್, ಡೇವಿಡ್ ಧೀರಾ ಕ್ರಾಸ್ತಾ , ಶರೀಫ್ ಕಂಠಿ, ಸಿದ್ದೀಕ್ ಕೊಕ್ಕೊ ಈ ಕುರಿತು ಮಾಹಿತಿ ನೀಡಿದರು.

” ಈ ಯೋಜನೆಯಿಂದ ಸುಳ್ಯ ನಗರದ ಹಲವಾರು ಜನರಿಗೆ ಪ್ರಯೋಜನ ವಾಗಲಿದೆ . ಈ ಮೊದಲು ತಮ್ಮ ಭೂಮಿಯ ದಾಖಲೆ ಸರಿ ಮಾಡಲು ಸಾಧ್ಯವಾಗದೆ ಅನಧಿಕೃತವಾಗಿ ಮನೆ ನಿರ್ಮಿಸಿದ ಮತ್ತು ಕಮರ್ಷಿಯಲ್ ಕಟ್ಟಡ ನಿರ್ಮಿಸಿದ ಜನರು ಅದಕ್ಕೆ ಡಬಲ್ ತೆರಿಗೆ ಕಟ್ಟಿಕೊಂಡು ಬರುತ್ತಿದ್ದಾರೆ. ಇದರ ದಾಖಲೆಗಳನ್ನು ಸರಿ ಪಡಿಸಲು ಸಾಧ್ಯವಾಗದೆ ಚಡಪಡಿಸುತ್ತಿದ್ದರು. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪೌರಾಡಳಿತ ಸಚಿವರಾದ ರಹೀಮ್ ಖಾನ್, ನಗರಾಭಿವೃದ್ಧಿ ಸಚಿವ ಬೈರತಿ
ಸುರೇಶ್ ರವರ ನೇತೃತ್ವದಲ್ಲಿ ರಾಜ್ಯ ಸರಕಾರವು ಎ-ಖಾತಾ ಬಿ ಖಾತಾ ಎಂಬ ಜನಸ್ನೇಹಿ ಕಾನೂನು ತಂದು ಸಂಕಷ್ಟದಲ್ಲಿ ಇದ್ದ ಜನತೆಯ ಕಣ್ಣೀರು ಒರೆಸುವ ಕಾರ್ಯಕ್ಕೆ ಕೈ ಹಾಕಿದೆ. ಇದಕ್ಕೆ ಕರ್ನಾಟಕ ಸರಕಾರಕ್ಕೆ ನಾಡಿನ ಜನತೆಯ ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಸುಳ್ಯ ನಗರದಲ್ಲಿ ಸುಮಾರು 7000 ಸಾವಿರಕ್ಕೂ ಆದಿಕ ಮನೆ ಮತ್ತು ಕಟ್ಟಡಗಳು ಇರುವುದು ಕಂಡು ಬಂದಿದೆ. ಇದರಲ್ಲಿ 700 ಕ್ಕೂ ಮಿಕ್ಕಿ ಅಕ್ರಮ ಮನೆ ಮತ್ತು ಕಟ್ಟಡಗಳಿವೆ . ಪ್ರಸ್ತುತ ಸರಕಾರ ತಂದ ಯೋಜನೆಯಲ್ಲಿ ಇದೆಲ್ಲವೂ ಸಕ್ರಮ ಗೊಳ್ಳುವಂತಾಗಿದೆ. ಅಲ್ಲದೆ ಈ ಮೊದಲು ಫಾರಂ 3 ಗಾಗಿ ಪಂಚಾಯತ್ ಕಚೇರಿಗೆ ಅಲೆದಾಡುತಿದ್ದ ಜನತೆಯ ದೊಡ್ಡ ಸಮಸ್ಯೆ ಮುಗಿದಂತಾಗಿದೆ ಎಂದರು.

ಇದರೊಂದಿಗೆ ಸುಳ್ಯ ನಗರದ ಸುಮಾರು 4000 ಸಾವಿರ ಜನರಿಗೆ ಎ ಖಾತಾ ಬಿ ಖಾತಾ ಲಭಿಸಲಿದೆ. ಈ ಮೊದಲು ಸಾವಿರಾರು ರೂಪಾಯಿ ಕೊಟ್ಟು ಪಡೆಯುತಿದ್ದ ಫಾರಂ 3 ಕೇವಲ 50 ರೂಪಾಯಿ ಯಲ್ಲಿ ಸಿಗುವಂತಾಗಿದೆ. ನಾಡಿನ ಜನತೆ ಇದರ ಸದುಪಯೋಗ ಪಡೆಯಬೇಕು. ಸಾರ್ವಜನಿಕರು ಕೇವಲ 50 ರೂಪಾಯಿ ಪೀಸ್ ಮಾತ್ರ ಕಟ್ಟಿ ಎ ಖಾತಾ ಬಿ ಖಾತಾ ಪಡೆಯಬಹುದು ಎಂದ ಅವರು, ಜನರಿಗೆ ಸರಕಾರದಿಂದ ದೊರೆತ ಆರನೇ ಭಾಗ್ಯ ಇದು. ಬಡ ವರ್ಗಕ್ಕೆ ಇಂಥ ಉಪಕಾರ ಮಾಡಿದ ಬೇರೆ ಉದಾಹರಣೆಗಳಿಲ್ಲ. ಸರಕಾರದಿಂದ ಇಂಥ ಪ್ರಯೋಜನ ಪಡೆದ ಜನ ಮುಂದಿನ ದಿನಗಳಲ್ಲಿ ಸರಕಾರವನ್ನು ಬೆಂಬಲಿಸುವ ಮೂಲಕ ಕೃತಜ್ಞತೆ ತೋರಬೇಕು ಎಂದರು.

ನಗರ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಭಟ್ ಕೊಡೆಂಕಿರಿ, ರಾಜು ಪಂಡಿತ್, ಭಾಸ್ಕರ್ ಪೂಜಾರಿ , ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ಇಕ್ಬಾಲ್ ಎಲಿಮಲೆ ಪತ್ರಿಕಾಗೋಷ್ಠಿಯಲ್ಲಿದ್ದರು.