ಸುಳ್ಯ ರೇಂಜ್ ಜಲ್ಸತುಲ್ ವಿದಾಅಃ ಹಾಗೂ ರಂಝಾನ್ ಕಿಟ್,ವಸ್ತ್ರ ವಿತರಣೆ

0

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಸುಳ್ಯ ರೇಂಜ್ ಇದರ ವತಿಯಿಂದ ಮದ್ರಸ ಅಧ್ಯಾಪಕರ ಬೀಳ್ಕೊಡುಗೆ ಸಮಾರಂಭ ಹಾಗೂ ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮವು ಮುನವ್ವಿರುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ನಡೆಯಿತು.ರೇಂಜ್ ಅಧ್ಯಕ್ಷ ಎಸ್ ಎಂ ಅಬೂಬಕ್ಕರ್ ಮುಸ್ಲಿಯಾರ್ ಬದಿಯಡ್ಕ ಅಧ್ಯಕ್ಷತೆ ವಹಿಸಿ,ಅಸ್ಸೆಯ್ಯಿದ್ ಹುಸೈನ್ ಪಾಷಾ ತಂಙಳ್ ಅನ್ಸಾರಿಯಾ ಉದ್ಘಾಟಿಸಿದರು.


ಗಾಂಧಿನಗರ ಜಮಾಅತ್ ಅಧ್ಯಕ್ಷ ಹಾಜಿ ಮುಹಮ್ಮದ್ ಕೆ ಎಂ ಎಸ್ ರವರು ಕಿಟ್ ವಿತರಣೆಗೆ ಚಾಲನೆ ನೀಡಿದರು.ಎಸ್ ಎಂ ಎ ಸುಳ್ಯ ರೀಜ್ಯನಲ್ ಅಧ್ಯಕ್ಷ ಅಬ್ದುಲ್ ಹಮೀದ್ ಸುಣ್ಣಮೂಲೆ,ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಫೈಝಲ್ ಝುಹ್ರಿ ಕಲ್ಲುಗುಂಡಿ,
ಗಾಂಧಿನಗರ ಮದ್ರಸ ಸದರ್ ಮುಅಲ್ಲಿಂ ಸಿರಾಜುದ್ದೀನ್ ಸಖಾಫಿ ಚಿಕ್ಕಮಗಳೂರು,
ಪೆರಾಜೆ ಖತೀಬ್ ಅಶ್ರಫ್ ಸಅದಿ ನೆಲ್ಯಾಡಿ,ಮೇನಾಲ ಖತೀಬ್ ಅಬ್ದುಲ್ಲ ಸಖಾಫಿ ,ಜಟ್ಟಿಪಳ್ಳ ಮದ್ರಸ ಸದರ್ ಮುಅಲ್ಲಿಂ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ,ಎಸ್ ಎಂ ಎ ಜಿಲ್ಲಾ ಉಪಾಧ್ಯಕ್ಷ ಶರೀಫ್ ಜಟ್ಟಿಪಳ್ಳ,ಅಬೂಬಕ್ಕರ್ ಸಿದ್ದೀಕ್ ಕಟ್ಟೆಕ್ಕಾರ್ಸ್ ಮುಂತಾದವರು ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಎಸ್ ಎಂ ಎ ಜಿಲ್ಲಾ ಕೋಶಾಧಿಕಾರಿ ಲತೀಫ್ ಹರ್ಲಡ್ಕ ರವರ ನೇತೃತ್ವದಲ್ಲಿ ಎಸ್ ಎಂ ಎ ಸುಳ್ಯ ರೀಜ್ಯನಲ್ ವಿತರಿಸುವ ಈದ್ ವಸ್ತ್ರಗಳನ್ನು ಮದ್ರಸ ಅಧ್ಯಾಪಕರುಗಳಿಗೆ ವಿತರಿಸಲಾಯಿತು

ರೇಂಜ್ ರಂಝಾನ್ ಕಿಟ್ ವಿತರಣೆಯಲ್ಲಿ ಎಸ್ ಎಂ ಎ ಸುಳ್ಯ ರೀಜ್ಯನಲ್ ಸಹಕರಿಸಿದರು.ರೇಂಜ್ ವ್ಯಾಪ್ತಿಯ ಮದ್ರಸ ಅಧ್ಯಾಪಕರುಗಳೆಲ್ಲರೂ ಭಾಗವಹಿಸಿದರು
ರೇಂಜ್ ಪ್ರಧಾನ ಕಾರ್ಯದರ್ಶಿ ನಿಝಾರ್ ಸಖಾಫಿ ಮುಡೂರು ಸ್ವಾಗತಿಸಿ,ವೆಲ್ಫೇರ್ ಅಧ್ಯಕ್ಷ ಜುನೈದ್ ಹಿಮಮಿ ಸಖಾಫಿ ಜಾಲ್ಸೂರು ವಂದಿಸಿದರು.ವೆಲ್ಫೇರ್ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಸಖಾಫಿ ಬೆಳ್ಳಾರೆ ನಿರೂಪಿಸಿದರು.