ಎಲ್.ಡಿ. ಬ್ಯಾಂಕ್: ಜ್ಞಾನೇಶ್ವರ ಶೇಟ್ ವಿರುದ್ಧ ಸೋಮನಾಥ ಪೂಜಾರಿ ಕೋರ್ಟಿಗೆ

0

ಸುಳ್ಯದ ಎಲ್.ಡಿ. ಬ್ಯಾಂಕ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಬಿಜೆಪಿ ಅಧಿಕೃತ ಅಭ್ಯರ್ಥಿಯ ಸೋಲಿಗೆ ಕಾರಣರಾದ ಜ್ಞಾನೇಶ್ವರ ಶೇಟ್‌ರವರ ವಿರುದ್ಧ ಪರಾಜಿತ ಅಭ್ಯರ್ಥಿ ಬಿಜೆಪಿಯ ಸೋಮನಾಥ ಪೂಜಾರಿ ಡಿ.ಆರ್. ಕೋರ್ಟಿನ ಮೆಟ್ಟಿಲೇರಿದ್ದಾರೆ.
ಜ್ಞಾನೇಶ್ವರ ಶೇಟ್‌ರವರು ಎಲ್.ಡಿ. ಬ್ಯಾಂಕ್‌ನ ಸರಾಫರಾಗಿದ್ದರು.

ಅವರು ಚುನಾವಣೆಗೆ ಸ್ಪರ್ಧಿಸುವುದಿದ್ದರೆ ೬ ತಿಂಗಳ ಮೊದಲು ರಾಜೀನಾಮೆ ನೀಡಬೇಕಿತ್ತು. ಆದರೆ ಅವರು ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೆಲ ದಿನಗಳ ಮೊದಲು ರಾಜೀನಾಮೆ ನೀಡಿದ್ದು ಅದರ ಅಂಗೀಕಾರವಾಗದೆಯೇ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಇದು ಕಾನೂನಿಗೆ ವಿರುದ್ಧವಾಗಿದ್ದು, ಅವರ ಗೆಲುವನ್ನು ರದ್ದು ಪಡಿಸಿ ನನ್ನನ್ನು ವಿಜಯಿ ಎಂದು ಘೋಷಿಸಬೇಕು. ಅಂದೇ ನಾನು ಚುನಾವಣಾಧಿಕಾರಿಯವರಿಗೆ ಆಕ್ಷೇಪ ಸಲ್ಲಿಸಿದ್ದರೂ ಅದನ್ನು ಅವರು ಸ್ವೀಕರಿಸದೆ ತಪ್ಪು ಮಾಡಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸೋಮನಾಥ ಪೂಜಾರಿ ಸಹಕಾರ ಸಂಘಗಳ ಉಪ ನಿಬಂಧಕರ ಕೋರ್ಟಿನಲ್ಲಿ ದಾವೆ ಹೂಡಿದ್ದಾರೆ.