ಕೊಲ್ಲಮೊಗ್ರು ಪೇಟೆಯಲ್ಲಿ ವೃತ್ತ ನಿರ್ಮಿಸುವ ಸಲುವಾಗಿ ಗುದ್ದಲಿ ಪೂಜೆ ಫೆ.24 ರಂದು ನೆರವೇರಿಸಲಾಯಿತು. ನೇಮಿಚಂದ್ರ ಬಳ್ಳಡ್ಕ ಗುದ್ದಲಿ ಪೂಜೆ ನೆರವೇರಿಸಿದರು.















ಈ ಸಂದರ್ಭದಲ್ಲಿ ಕೊಲ್ಲಮೊಗ್ರು ಗ್ರಾ.ಪಂ ನ ಅಧ್ಯಕ್ಷೆ ಶ್ರೀಮತಿ ಮೋಹಿನಿ ಕಟ್ಟ, ಗ್ರಾ.ಪಂ ಉಪಾಧ್ಯಕ್ಷ ಮಾದವ ಚಾಂತಾಳ, ಪಿಡಿಒ ಚೆನ್ನಪ್ಪ ನಾಯ್ಕ, ಗ್ರಾ.ಪಂ ಸದಸ್ಯ ಅಶ್ವಥ್ ಯಲದಾಳು,ಕೊಚ್ಚಿಲ ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶೇಖರ್ ಅಂಬೆಕಲ್ಲು, ಕೊಚ್ಚಿಲ ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ದೇವಾಲಯದ ಸೇವಾ ಸಮಿತಿ ಅಧ್ಯಕ್ಷ ಮಣಿಕಂಠ ಕೊಳಗೆ, ಸ್ಥಳೀಯರಾದ ಚಂದ್ರಶೇಖರ ಕೊಂದಾಳ, ಗಣೇಶ ಶಿವಾಲ, ಉದಯ ಶಿವಾಲ, ಸುರೇಶ್ ಮಿತ್ತಮಜಲು, ಹರೀಶ್ ಪೂಜಾರಿ, ಶೇಖರ ಕೊಂದಾಳ, ನೀಲಪ್ಪ ಅಂಬೆಕಲ್ಲು, ಮತ್ತಿತರರು ಉಪಸ್ಥಿತರಿದ್ದರು. ಗ್ರಾ.ಪಂ ವತಿಯಿಂದ 15 ನೇ ಹಣಕಾಸು ಯೋಜನೆಯಲ್ಲಿ ತಲಾ 5 ಲಕ್ಷದಂತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು ಚರಂಡಿ ನಿರ್ಮಾಣ ಮತ್ತಿತರರ ಕೆಲಸ ನಡೆಯಲಿದೆ.










