ಗುತ್ತಿಗಾರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಸತ್ಯನಾರಾಯಣ ಪೂಜೆ ಹಾಗೂ 62 ನೇ ವರ್ಷದ ಅರ್ಧ ಏಕಾಹ ಭಜನೆ ಫೆ.23 ರಂದು ನಡೆಯಿತು.

ಬೆಳಗ್ಗೆ ದೀಪ ಪ್ರತಿಷ್ಠೆಯನ್ನು ಮಹಾಬಲೇಶ್ವರ ಭಟ್ ನೆರವೇರಿಸಿದರು. ಬಳಿಕ ಅರ್ಧ ಏಕಾಹ ಭಜನೆ ಆರಂಭವಾಯಿತು. ಬಳಿಕ ಗಣಪತಿ ಹೋಮ, ಸತ್ಯನಾರಾಯಣ ಪೂಜೆ ನಡೆಯಿತು








ಮಧ್ಯಾಹ್ನ ಪ್ರಸಾದ್ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.

ಸಂಜೆ ಗುತ್ತಿಗಾರು ಪೇಟೆಯಲ್ಲಿ ಭಜನಾ ತಂಡಗಳಿಂದ ಮೆರವಣಿಗೆ ನಡೆಯಿತು. ಬಳಿಕ ಭಜನಾ ಮಂದಿರ ಬಳಿ ನೃತ್ಯ ಭಜನೆ ನಡೆಯಿತು. ಭಜನಾ ಮಂದಿರದ ಗೌರವಾಧ್ಯಕ್ಷ ಕಿಶೋರ್ ಕುಮಾರ್ ಪೈಕ, ಅಧ್ಯಕ್ಷ ರವಿಪ್ರಕಾಶ್ ಬಳ್ಳಡ್ಕ, ಕಾರ್ಯದರ್ಶಿ ಪೂರ್ಣಚಂದ್ರ ಪೈಕ ಹಾಗೂ ಸಮಿತಿಯ ಪದಾಧಿಕಾರಿಗಳು, ವಿವಿಧ ಸಮಿತಿಯವರು ಕಾರ್ಯಕ್ರಮ ಯಶಸ್ವಿಗೊಳಿಸಿದರು.










