ಕೊಲ್ಲಮೊಗ್ರ : ಅರೆಭಾಷೆ ಅಕಾಡೆಮಿ ವತಿಯಿಂದ ವಾದ್ಯಪರಿಕರ ವಿತರಣೆ

0


ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಮಡಿಕೇರಿ ಕರ್ನಾಟಕ ಸರ್ಕಾರ ಇದರ ವತಿಯಿಂದ ೨೦೨೨ ಮತ್ತು ೨೦೨೩ ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಂಶೋಧನಾ ಪ್ರಬಂಧ ಮತ್ತು ಕೃತಿಗಳ ಬಿಡುಗಡೆ ಇಂದು ಮಡಿಕೇರಿಯ ಕೊಡಗು ಗೌಡ ಸಮಾಜದಲ್ಲಿ ನಡೆಯಿತು.


ಈ ಸಮಾರಂಭದಲ್ಲಿ ದೈವ ನರ್ಥಕ ಕೊಲ್ಲಮೊಗುರು ಗ್ರಾಮದ ಬೆಂಡೋಡಿಯ ಬೊಳಿಯ ಅಜಿಲಮತ್ತು ಅವರ ತಂಡಕ್ಕೆ ಪರಿಶಿಷ್ಟ ಪಂಗಡದವರಿಗೆ ನೀಡುವ ವಾದ್ಯ ಪರಿಕರಗಳನ್ನು ಈ ಸಮಾರಂಭದಲ್ಲಿ ನೀಡಲಾಯಿತು. ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸೇರಿದಂತೆ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ವಾದ್ಯ ಪರಿಕರಣವನ್ನು ವಿತರಿಸಲಾಯಿತು. ವಾದ್ಯ ಪರಿಕರಗಳನ್ನು ಮಂಜೂರುಗೊಳಿಸುವಲ್ಲಿ ಅಕಾಡೆಮಿಯ ಮಾಜಿ ಸದಸ್ಯ ದಿನೇಶ್ ಹಾಲೆಮಜಲ್‌ರವರು ಸಹಕರಿಸಿದ್ದಾರೆ.