ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

0

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಗೆ ಜಿಲ್ಲಾ ಗವರ್ನರ್ ರೊ.ವಿಕ್ರಂ ದತ್ತರವರು ಮಾ.11 ರಂದು ಅಧಿಕೃತ ಭೇಟಿ ನೀಡಿದರು.

ಬೆಳಿಗ್ಗೆ ಎಡಮಂಗಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಭೋಜನಾಲಯದ ಉದ್ಘಾಟನೆಯನ್ನು ಗವರ್ನರ್ ವಿಕ್ರಂ ದತ್ತರವರು ನೆರವೇರಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಗವರ್ನರ್ ರೊ.ಕೆ.ವಿನಯ ಕುಮಾರ್,ಝೋನಲ್ ಲೆಫ್ಟಿನೆಂಟ್ ರೊ.ವಿಶ್ವನಾಥ ನಡುತೋಟ, ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಅಧ್ಯಕ್ಷ ಚಂದ್ರಶೇಖರ ರೈ ಬಜನಿ,ಕಾರ್ಯದರ್ಶಿ ಎ.ಕೆ‌.ಮಣಿಯಾಣಿ, ರೊ.ಸೀತಾರಾಮ ರೈ ಸವಣೂರು,ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪಾರ್ವತಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.


ಕಾರ್ಯಕ್ರಮದ ನಡೆದ ಬಳಿಕ ಹಲವು ಕಡೆಗಳಲ್ಲಿ ವಿವಿಧ ಕೊಡುಗೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಸಂಜೆ ಅಮ್ಮು ರೈ ದೇವಿ ಹೈಟ್ಸ್ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.


ವೇದಿಕೆಯಲ್ಲಿ ಜಿಲ್ಲಾ ಗವರ್ನರ್ ವಿಕ್ರಂ ದತ್ತ,ಅಸಿಸ್ಟೆಂಟ್ ಗವರ್ನರ್ ರೊ.ಕೆ.ವಿನಯ ಕುಮಾರ್,ಝೋನಲ್ ಲೆಫ್ಟಿನೆಂಟ್ ರೊ.ವಿಶ್ವನಾಥ ನಡುತೋಟ, ಬೆಳ್ಳಾರೆ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ರೈ ಬಜನಿ ,ಕಾರ್ಯದರ್ಶಿ ಎ.ಕೆ.ಮಣಿಯಾಣಿ ಉಪಸ್ಥಿತರಿರುವರು ಎಂದು ಬೆಳ್ಳಾರೆ ರೋಟರಿ ಕ್ಲಬ್ ಅಧ್ಯಕ್ಷರು ತಿಳಿಸಿದ್ದಾರೆ.