ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

0

ವಿವಿಧ ಕೊಡುಗೆಗಳ ಲೋಕಾರ್ಪಣೆ, ಸಾಧಕರಿಗೆ ಸನ್ಮಾನ

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಗೆ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಮಾ.11 ರಂದು ಭೇಟಿ ನೀಡಿದರು.
ರಾತ್ರಿ ಬೆಳ್ಳಾರೆಯ ದೇವಿ ಹೈಟ್ಸ್ ಸಭಾಂಗಣದಲ್ಲಿ ಸಭಾಕಾರ್ಯಕ್ರಮ ನಡೆಯಿತು.
ಬೆಳ್ಳಾರೆ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ರೈ ಬಜನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ನಡೆಯಿತು.
ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಕಿರಣ್,
ಪ್ರತಿಭಾವಂತ ವಿದ್ಯಾರ್ಥಿನಿ ಕ್ರೀಡಾ ಪ್ರತಿಭೆ ಹರ್ಷಪ್ರಿಯ,ಪದ್ಮನಾಭ ರೈ ಬಜನಿ,ಸಾಗರ್ ಇವರನ್ನು ಶಾಲು ಹೊದಿಸಿ, ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಪತ್ರ ಮತ್ತು ಕೊಡುಗೆ ನೀಡಿದವರ ಪರಿಚಯವನ್ನು ರೊ.ಪ್ರಸಾದ್ ಕತ್ಲಡ್ಕ, ರೊ.ಸತ್ಯನಾರಾಯಣ,ರೊ‌.ಮಹಾಬಲ ತಂಟೆಪ್ಪಾಡಿ, ವೀರನಾಥ ಪಡ್ಪು ರವರು ನೀಡಿದರು.

ಅಂಗನವಾಡಿಗಳಿಗೆ ಕೊಡುಗೆ
ಐವರ್ನಾಡಿನ ಪಾಲೆಪ್ಪಾಡಿ ಅಂಗನವಾಡಿ ಕೇಂದ್ರ, ದೇವರಕಾನ ಅಂಗನವಾಡಿ ಕೇಂದ್ರ, ಪೆರುವಾಜೆ ಗ್ರಾಮದ ಮುಕ್ಕೂರು ಅಂಗನವಾಡಿ ಕೇಂದ್ರಕ್ಕೆ ಎಲ್.ಇ.ಡಿ.ಟೀವಿಯನ್ನು ಕೊಡುಗೆಯಾಗಿ ನೀಡಲಾಯಿತು.
ರೋಟರಿ ಬುಲೆಟಿನ್ ನ್ನು ಅಸಿಸ್ಟೆಂಟ್ ಗವರ್ನರ್ ಕೆ.ವಿನಯ ಕುಮಾರ್ ಬಿಡುಗಡೆಗೊಳಿಸಿದರು.

ವೇದಿಕೆಯಲ್ಲಿ ಝೋನಲ್ ಲೆಫ್ಟಿನೆಂಟ್ ರೊ.ವಿಶ್ವನಾಥ ನಡುತೋಟ,ಬೆಳ್ಳಾರೆ ರೋಟರಿ ಕ್ಲಬ್ ಕಾರ್ಯದರ್ಶಿ ಎ.ಕೆ‌.ಮಣಿಯಾಣಿ ಉಪಸ್ಥಿತರಿದ್ದರು.
ರೊ.ನಮಿತಾ ಆಳ್ವ ಪ್ರಾರ್ಥಿಸಿ,ಚಂದ್ರಶೇಖರ ರೈ ಬಜನಿ ಸ್ವಾಗತಿಸಿ,ನಿಯೋಜಿತ ಅಧ್ಯಕ್ಷ ವಿಶ್ವನಾಥ ಕೊಳಂಬಳ ವಂದಿಸಿದರು.ರೊ.ಪ್ರಭಾಕರ ಆಳ್ವ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಕೊಡುಗೆಗಳ ಲೋಕಾರ್ಪಣೆ

ಬೆಳಿಗ್ಗೆ ವಿವಿಧ ಕೊಡುಗೆಗಳ ಲೋಕಾರ್ಪಣೆ ನಡೆಯಿತು.
ಎಡಮಂಗಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಜಿತ್ ರೈ ಮಾಲೆಂಗಿರಿಯವರ ಸಹಭಾಗಿತ್ವದಲ್ಲಿ ನಿರ್ಮಾಣವಾದ ನೂತನ ಭೋಜನಾಲಯ ಉದ್ಘಾಟನೆ,ಪದ್ಮನಾಭ ರೈ ಬಜನಿಯವರು ಕೊಡುಗೆಯಾಗಿ ನೀಡಿದ ಊಟದ ಬಟ್ಟಲು ಸ್ಟಾಂಡನ್ನು ಕೊಡುಗೆಯಾಗಿ ನೀಡಲಾಯಿತು.
ಕಾಯರ್ತಡ್ಕ ಕಿರಿಯ ಪ್ರಾಥಮಿಕ ಶಾಲೆಗೆ ಬ್ಯಾಂಕ್ ಆಫ್ ಬರೊಡ ಸಹಭಾಗಿತ್ವದಲ್ಲಿ ಬೆಂಚು,ಡೆಸ್ಕ್ ಕೊಡುಗೆಯಾಗಿ ನೀಡಲಾಯಿತು.ಬೆಳ್ಳಾರೆ ಕೆಪಿಎಸ್ ಕೆ ಸ್ಕೂಲ್ ಲಾಂಜ್ ಕೊಡಿಗೆಯಾಗಿ ನೀಡಿದ್ದು ಇದರ ಉದ್ಘಾಟನೆಯನ್ನು
ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ನೆರವೇರಿಸಿದರು.


ಈ ಸಂದರ್ಭದಲ್ಲಿ ಹಲವಾರು ಜನ ಗಣ್ಯರು,ಶಾಲಾ ವಿದ್ಯಾರ್ಥಿಗಳು,ಶಿಕ್ಷಕರು ಹಾಗೂ ರೋಟರಿ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.