ಪೈಂದೋಡಿ ದೇವಳದಲ್ಲಿ ಪವಮಾನ ಅಭಿಷೇಕ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

0


ಪಂಜ ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಸೌರಮಾನ (ವಿಶು) ಯುಗಾದಿಯ ಪ್ರಯುಕ್ತ ಪವಮಾನ ಅಭಿಷೇಕ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಎ.14 ರಂದು ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೇಶವ ಗೌಡ ಕುಧ್ವ , ನಿಕಟಪೂರ್ವಾಧ್ಯಕ್ಷ ಭವಾನಿಶಂಕರ ಪಾಲೋಳಿ,
ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ವಿಷ್ಣು ಪೈಂದೋಡಿ ಅರ್ಚಕರು, ಕಿಶೋರ್ ಕುಮಾರ್ ಪುಂಡಿಮನೆ, ರವಿಕುಮಾರ್ ಚಳ್ಳಕೋಡಿ, ಧರ್ಮಪಾಲ ಕಂಡೂರು, ಲಕ್ಷ್ಮಣ ಗೌಡ ಕುಳ್ಳಕೋಡಿ, ಶ್ರೀಮತಿ ಲೀಲಾವತಿ ಅಳ್ಪೆ ,ಜನಾರ್ಧನ ನಾಯ್ಕ ಪೊಳೆಂಜ, ಭಕ್ತಾದಿಗಳು ಉಪಸ್ಥಿತರಿದ್ದರು.