ನೆಟ್ಟಾರು : ಆಸರೆ ಕ್ಲಬ್ ನ ಸದಸ್ಯರಿಂದ ಸ್ವಚ್ಛತೆ ಕಾರ್ಯಕ್ರಮ

0

ಆಸರೆ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ವತಿಯಿಂದ ನಡೆಯುತ್ತಿರುವ “ಕ್ರೀಡಾ ಕ್ಯಾಂಪ್” ನ ವಿದ್ಯಾರ್ಥಿಗಳಿಂದ ಹಾಗೂ ಆಸರೆ ಕ್ಲಬ್ ನ ಸದಸ್ಯರಿಂದ ನೆಟ್ಟಾರಿನ ಸುತ್ತ ಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷರಾದ ಚಂದ್ರಶೇಖರ ಚಾವಡಿ ಬಾಗಿಲು,ನೆಟ್ಟಾರು.ಗೌರವಧ್ಯಕ್ಷರಾದ ಲೋಕೇಶ್.ಎನ್.ಪೂಜಾರಿ.ಗೌರವ ಸಲಹೆಗಾರರಾದ ವಸಂತ ಕುಲಾಲ್ ನೆಟ್ಟಾರು.ಸಂಘದ ಸದಸ್ಯರಾದ ಉಮೇಶ್ ಕೋಡಿಮನೆ.ಪ್ರಭಾಕರ ಕುಲಾಲ್ ನೆಟ್ಟಾರು.ದಿವಾಕರ ನೆಟ್ಟಾರು.ಸತ್ಯಣ್ಣ ಮಣಿಕ್ಕಾರ ಹಾಜರಿದ್ದರು.