ಕಲ್ಮಕಾರು: ಬಾಳೆಬೈಲು ರಸ್ತೆ ದುರವಸ್ಥೆ ಖಂಡಿಸಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಕೆ

0

ಕೊಲ್ಲಮೊಗ್ರು ಗ್ರಾ. ಪಂ. ವ್ಯಾಪ್ತಿಯ ಕಲ್ಮಕಾರಿನ ಬಾಳೆಬೈಲಿನ ನಾಗರಿಕರು ಮುಂದಿನ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಚುನಾವಣಾ ಬಹಿಷ್ಕಾರದ ಬ್ಯಾನರನ್ನು ಏ.20 ರಂದು ಅಳವಡಿಸಿದ್ದಾರೆ.

ಕಲ್ಲಕಾರಿನ ಶಕ್ತಿನಗರದಿಂದ ಬಾಳೆಬೈಲಿಗೆ ಹೋಗುವ ರಸ್ತೆಯು ತೀರ ಹದಗೆಟ್ಟಿದ್ದು ವಾಹನ ಸಂಚಾರವಂತು ಬಹಳ ತ್ರಾಸ ಆದಂತಾಗಿದೆ. ಈ ಭಾಗದಿಂದ ಹಲವಾರು ವಿದ್ಯಾರ್ಥಿಗಳು ಶಾಲೆಗೆ ಬರುತಿದ್ದು ರಸ್ತೆ ಹಾಳಾಗಿ ಬಹಳಷ್ಟು ಕಷ್ಟಪಡುತ್ತಿದ್ದಾರೆ. ರಸ್ತೆ ಅಭಿವೃದ್ಧಿ ಬಗ್ಗೆ ಶಾಸಕರು, ಸಂಸದರು , ಆದಿಯಾಗಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಅರ್ಪಿಸಿದರು ಯಾವುದೇ ಪ್ರಯೋಜನ ಆಗದಿದ್ದು ನಾವುಗಳು ಇದನ್ನು ಖಂಡಿಸುತ್ತೇವೆ. ಮುಂದಿನ ದಿನಗಳಲ್ಲಿ ಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ.