ಅಜ್ಜಾವರ: ಝೖನ್ ಎಕ್ಸಲೆನ್ಸ್ ಫಾರ್ ಮೊರೆಲ್ ಎಜುಕೇಶನ್ ಇದರ 8ನೇ ವಾರ್ಷಿಕ ಹಾಗೂ 2ನೇ ಸನದುದಾನ ಸಮ್ಮೇಳನ

0

ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಗಾಗಿ ಸಮಾಜದ ಪ್ರೋತ್ಸಾಹ ಬಹು ಮುಖ್ಯ : ನೌಶಾದ್ ಬಾಖವಿ

ಮಹಿಳೆಯರ ಸಮನ್ವಯ ವಿಧ್ಯಭ್ಯಾಸ ಉನ್ನತಿಗಾಗಿ SKSSF ಸುಳ್ಯದ ಅಡ್ಕ ಇರುವಂಬಳ್ಳ ಶಾಖೆ ಆರಂಬಿಸಿದ ಝೈನ್ ಎಕ್ಸಲೆನ್ಸ್ ಪಾರ್ ಮೊರೆಲ್ ಎಜುಕೇಶನ್ ವಿಧ್ಯಾಸಂಸ್ಥೆಯ ಕಾರ್ಯ ಚಟುವಟಿಕೆ ಬಹಳ ಶ್ಲಾಘನೀಯ ವಾಗಿದ್ದು ಇಂತಹ ಸಂಸ್ಥೆಗಳು ಬೆಳೆಯಲು ಸಮಾಜದ ಪ್ರತಿಯೊಬ್ಬರ ಪ್ರೋತ್ಸಾಹ ಅಗತ್ಯ ವಾಗಿದೆ ಎಂದು ಖ್ಯಾತ ಪ್ರಭಾಷಣಕಾರ ನೌಶಾದ್ ಬಾಖವಿ ರವರು ತಮ್ಮ ಮುಖ್ಯ ಪ್ರಭಾಷಣದಲ್ಲಿ ಹೇಳಿದರು.

ಅವರು ಎಪ್ರೀಲ್ 25 ಅಜ್ಜಾವರ ಅಡ್ಕ ದಲ್ಲಿ ನಡೆದ ಝೖನ್ ಎಕ್ಸೆಲೆನ್ಸ್ ಫಾರ್ ಮೊರೆಲ್ ಎಜುಕೇಶನ್ ಅಡ್ಕ ಇದರ ಎಂಟನೇ ವಾರ್ಷಿಕ ಹಾಗೂ ಎರಡನೇ ಸನದುದಾನ ಸಮ್ಮೇಳನದಲ್ಲಿ ಮಾತನಾಡಿ ಹೇಳಿದರು.

ಕಾರ್ಯಕ್ರಮದಲ್ಲಿ ಸಂಜೆ 7 ಘಂಟೆಗೆ ಮಜ್ಲಿಸುನ್ನೂರ್ ಆತ್ಮೀಯ ಸಂಗಮ ಝೈನಿಯಾ ಚಯರ್ಮೆನ್ ಸಯ್ಯಿದ್ ಅಕ್ರಂ ಅಲೀ ತಂಙಳ್ ರವರ ನೇತೃತ್ವದಲ್ಲಿ ನಡೆಯಿತು.

ಸಮಾರೋಪ ಸಮಾರಂಭದ ಕಾರ್ಯಕ್ರಮದ ದುಆ ನೇತೃತ್ವವನ್ನು ಸಯ್ಯಿದ್ ಝೈನುಲ್ ಅಬಿದೀನ್ ತಂಙಳ್ ದುಗಲಡ್ಕರವರು ನಿರ್ವಹಿಸಿ ಮಾತನಾಡಿ ಸಂಸ್ಥೆಗೆ ಶುಭಾರೈಸಿದರು.ಈ ಸಂಧರ್ಭದಲ್ಲಿ ಸಂಸ್ಥೆಯಲ್ಲಿ ಕಲಿತು ಸನದುದಾನ ಸ್ವೀಕರಿಸಿದ ಸುಮಾರು 20 ವಿದ್ಯಾರ್ಥಿನಿಯರ ಪ್ರಮಾಣ ಪತ್ರವನ್ನು ಅವರ ಪೋಷಕರಿಗೆ ವಿತರಿಸಿದರು.

ನಂತರ ಅಂತರಾಷ್ಟ್ರೀಯ ಖ್ಯಾತ ವಾಗ್ಮಿ ನೌಶಾದ್ ಬಾಖವಿ ತಿರುವನಂತಪುರಂ ರವರ ಪ್ರಭಾಷಣ ನಡೆಯಿತು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕ್ಕೊಂಡಿರುವ ಹಾಗೂ ಸಂಸ್ಥೆಯ ಅಭಿವೃದ್ಧಿಗೆ ಕೈ ಜೋಡಿಸಿದ ಮುಖಂಡರುಗಳಾದ ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್, ರಶೀದ್ ಬೆಲ್ಜಿಯಂ, ಹಾಜಿ ಇಬ್ರಾಹಿಂ ಕತ್ತರ್ ಮಂಡೆಕ್ಕೋಲು, ಲತೀಫ್ ಹಾಜಿ ಬೆಂಗಳೂರು, ಅಬ್ಬಾಸ್ ಹಾಜಿ ಮೊದಲಾದವರನ್ನು ಗುರುತಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಕತ್ತರ್ ಮಂಡೆಕ್ಕೋಲುರವರು ಅಧ್ಯಕ್ಷತೆ ವಹಿಸಿದ್ದರು.

ಪ್ರಧಾನ ಕಾರ್ಯದರ್ಶಿ ಅಡ್ವಕೆಟ್ ಮುಹಿಯದ್ದೀನ್ ಅನ್ಸಾರಿ ಪ್ರಾಸ್ತವಿಕ ಮಾತನಾಡಿ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಸಯ್ಯಿದ್ ಹಕೀಂ ತಂಙ್ಙಳ್ ಆದೂರು, ಉಸ್ತಾದ್ ಶರೀಫ್ ಪೈಝಿ ಕಡಬ , ನಸೀಹ್ ದಾರಿಮಿ, ಸಂಸ್ಥೆಯ ಪ್ರಿನ್ಸಿಪಾಲ್ ಅಬ್ದುಲ್ಲಾ ನಿಝಾಮಿ,ಮುಖಂಡರು ಗಳಾದ ಟಿ ಎಂ ಶಹಿದ್ ತೆಕ್ಕಿಲ್, ಹಸೈನಾರ್ ಫೈಝಿ ಅಜ್ಜಾವರ ಖತೀಬ್, ರಶೀದ್ ಮಾಸ್ಟರ್, ಹಾಜಿ ಅಬ್ದುಲ್ ರಜ್ಜಾಕ್ ರಾಜಧಾನಿ, ಹಾಜಿ ಕೆ ಎಂ ಎಸ್ ಮಹಮ್ಮದ್,ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್ಸ್, ಜಿ ಕೆ ಹಮೀದ್ ಕಲ್ಲುಗುಂಡಿ, ಸಿದ್ದಿಕ್ ಕೊಕ್ಕೊ, ಕೆ ಎಸ್ ಉಮ್ಮರ್ ಸುಳ್ಯ, ಉಮ್ಮರ್ ದಾರಿಮಿ, ಯಹಿಯ್ಯಾ, ಇಕ್ಬಾಲ್ ಸುಣ್ಣ ಮೂಲೆ, ತಾಜ್ ಮಹಮ್ಮದ್, ಇಕ್ಬಾಲ್ ಬಾಳಿಲ, ಅಶ್ರಫ್ ಗುಂಡಿ, ಹಸೈನಾರ್ ಹಾಜಿ ಗೊರಡ್ಕ,ಸೇರಿದಂತೆ ಅನೇಕ ಗಣ್ಯರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಯುಕ್ತ ಸಂಜೆ 4 :30 ಕ್ಕೆ ದ್ವಜಾರೋಹಣವನ್ನು ಹಸೈನಾರ್ ಹಾಜಿ ರವರು ನೆರವೇರಿಸಿ ಅಧ್ಯಕ್ಷತೆಯಲ್ಲಿ ಸೌಹಾರ್ದಸಮಾರಂಭ ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮುಹಿನುದ್ದೀನ್ ಫೈಝಿ,ಹಿರಿಯ ಸಾಮಾಜಿಕ ಮುಖಂಡ ದನಂಜಯ ಅಡ್ಪಂಗಾಯ, ರಂಜಿತ್ ರೈ ಮೇನಾಲ, ಸುಳ್ಯ ಸುಡಾ ಅಧ್ಯಕ್ಷ ಕೆ ಎಂ ಮುಸ್ತಫಾ ಜನತಾ, ಎ ಬಿ ಅಬ್ಬಾಸ್ ಅಡ್ಕ, ಗ್ರಾ. ಪಂ ಉಪಾಧ್ಯಕ್ಷ ಅಬ್ದುಲ್ಲಾ ಅಜ್ಜಾವರ ಮೊದಲಾದವರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದರು.

ಕಾರ್ಯದರ್ಶಿ ಮಹಮ್ಮದ್ ಶಾಫೀ ದಾರಿಮಿ ಅಜ್ಜಾವರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಝೈನಿಯಾ ಪ್ರ ಕಾರ್ಯದರ್ಶಿ ಮೊಹಿಯ್ಯದ್ದೀನ್ ಅನ್ಸಾರಿ, ಸ್ವಾಗತ ಸಮಿತಿ ಕನ್ವೀನರ್ ಸಿದ್ದೀಕ್ ಅಡ್ಕ ಹಾಗೂ ಎಸ್ ಕೆ ಎಸ್ ಎಸ್ ಎಫ್ ಸಂಘಟನೆ,ವಿಖಾಯ ಸಂಘ ಸಮಿತಿಯ ಎಲ್ಲಾ ಸದಸ್ಯರು ಗಳು ಹಾಗೂ ಊರಿನ ಯುವಕರು ಸಹಕರಿಸಿದರು.

ಸನದುದಾನಕ್ಕೆ ಪ್ರತ್ಯೇಕ ನಿರ್ಮಿಸಿದ ವೇದಿಕೆಯಲ್ಲಿ ವಿದ್ಯಾರ್ಥಿನಿಗಳಿಗೆ ಸಯ್ಯದತರುಗಳಾದ ಅಸ್ಮಾ ಬೀವಿ ಕರಾವಳಿ, ಮುನೀರಾ ಬೀವಿ,ರಮ್ಲಾ ಬೀವಿ ಆದೂರು ರವರು ಸನದುದಾನ ಹಾಗೂ ವಸ್ತ್ರವಿತರಣೆ ಮಾಡಿದರು.