ಜಟ್ಟಿಪಳ್ಳ ಬಡ ವಿಶೇಷಚೇತನ ಯುವಕನಿಗೆ ಮನೆ ನಿರ್ಮಿಸಿಕೊಟ್ಟ ಊರವರು

0

ಸೂರಿಲ್ಲದವರಿಗೆ ಸೂರು ನಿರ್ಮಿಸಿ ಆಸರೆಯಾಗುವುದು ಮಾದರಿ ಸೇವೆ : ಡಾ| ಹಕೀಂ ಅಝ್ಹರಿ



ಜಟ್ಟಿಪಳ್ಳ ಊರವರು ಇಕ್ಕು ಮನೆ ಎಂಬ ವಾಟ್ಸಾಪ್ ರಚಿಸಿ ಆ ಮೂಲಕ ವಿಶೇಷ ಚೇತನ ಯುವಕ ಇಕ್ಬಾಲ್ ಹಾಗೂ ಅವರ ಅನಾರೋಗ್ಯ ಪೀಡಿತ ತಂದೆ ಇಬ್ರಾಹಿಂ ರವರಿಗೆ ದಾನಿಗಳ ಸಹಕಾರದೊಂದಿಗೆ ನೂತನವಾಗಿ ನಿರ್ಮಿಸಿದ ಇಕ್ಕುಮನೆಯ ಹಸ್ತಾಂತರ ಹಾಗೂ ಉದ್ಘಾಟನಾ ಕಾರ್ಯಕ್ರಮ ಗಣ್ಯರ ಹಾಗೂ ಊರವರ ಉಪಸ್ಥಿತಿಯೊಂದಿಗೆ ಜಟ್ಟಿಪಳ್ಳದಲ್ಲಿ ನಡೆಯಿತು.

ವಿಶೇಷ ಕಾರ್ಯಕ್ರಮ ನಿಮಿತ್ತ ಹರ್ಲಡ್ಕ ವಿಲ್ಲಾಗೆ ಆಗಮಿಸಿದ ಮರ್ಕಝ್ ನಾಲೇಜ್ ಸಿಟಿ ಡೇರೆಕ್ಟರ್ ಡಾ| ಅಬ್ದುಲ್ ಹಕೀಂ ಅಝ್ಹರಿ ಕಾಂತಪುರಂ ಮನೆಯನ್ನು ಉದ್ಘಾಟಿಸಿ ಶುಭ ಹಾರೈಸಿ ಸೂರಿಲ್ಲದವರಿಗೆ ಸೂರು ನಿರ್ಮಿಸಿ ಬಡ ನಿರ್ಗತಿಕರ ಕಣ್ಣೀರೊರೆಸುವ ಸೇವೆ ನಿಜಕ್ಕೂ ಮಾದರೀ ಯೋಗ್ಯವೆಂದರು.ಸೇವೆಯೊಂದಿಗೆ ಕೈ ಜೋಡಿಸಿದ ಸರ್ವರನ್ನೂ ಅಭಿನಂದಿಸಿದರು.
ಮನೆಯನ್ನು ಹಸ್ತಾಂತರಿಸಿ ದುವಾಶಿರ್ವಚನ ಮಾಡಿದ ಅಸ್ಸೆಯ್ಯಿದ್ ಕುಂಞ್ಞಿಕೋಯ ತಂಙಳ್ ಸಅದಿ ಸುಳ್ಯರವರು ಹಿತವಚನ ನೀಡಿ ಬಡ ನಿರ್ಗತಿಕರ ಸೇವೆ ಅಲ್ಲಾಹನ ಪ್ರೀತಿ ಪಾತ್ರದ ಪ್ರಮುಖ ಹಾದಿಯೆಂದರು.
ಬುಸ್ತಾನುಲ್ ಉಲೂಂ ಮದ್ರಸ ಜಟ್ಟಿಪಳ್ಳ ಸದರ್ ಮುಅಲ್ಲಿಂ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಮಾತನಾಡಿ ಜಟ್ಟಿಪಳ್ಳದ ಒಗ್ಗಟ್ಟಿನ ಕಾರ್ಯ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ,ಇನ್ನಷ್ಟು ಸೇವೆಗಳ ಮೂಲಕ ಜೀವನ ಸಾರ್ಥಕ ಗೊಳಿಸೋಣವೆಂದರು.
ಅಧ್ಯಾಪಕ ಸಿರಾಜ್ ಸಅದಿ ಅಲೆಕ್ಕಾಡಿ ರವರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಉದ್ಯಮಿ ಅಬ್ದುಲ್‌ ಲತೀಫ್ ಹರ್ಲಡ್ಕ, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್, ಮಾಜಿ ಅಧ್ಯಕ್ಷ ಶುಕೂರ್ ಹಾಜಿ,ಜಟ್ಟಿಪಳ್ಳ ಹಯಾತುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಾಜಿ ಮಹಮ್ಮದ್ ,ಗೌರವಧ್ಯಕ್ಷ ಅಬೂಭಕ್ಕರ್ ಕೆಎ, ಬಿಎಂ,ಮಾಜಿ ಅಧ್ಯಕ್ಷರುಗಳಾದ ಹಾಜಿ ಅಬೂಭಕ್ಕರ್ ವಿಕೆ,ರಶೀದ್ ಜಟ್ಟಿಪಳ್ಳ ಮೂಸಾ ಕೆಎಂ,ಮಹಮ್ಮದ್ ನಾವೂರು,ಕಲಂದರ್ ನಾವೂರು,ಅಬೂಭಕ್ಕರ್ ಸುರತ್ಕಲ್,ಮಹಮ್ಮದ್ ವಿಕೆ,ಸಲಾಂ ಎಂ,ಶಿಹಾಬ್ ಷಾ,ರಜಾಕ್ ಕೆ ಎಂ ಮೊದಲಾದವರು ಉಪಸ್ಥಿತರಿದ್ದರು
ಮನೆ ನಿರ್ಮಾಣ ಸಮಿತಿ ಅಧ್ಯಕ್ಷ ಎನ್ ಎ ಅಬ್ದುಲ್ಲಾ ಸ್ವಾಗತಿಸಿ ನಿರ್ಮಾಣ ಉಸ್ತುವಾರಿ ವಹಿಸಿದ್ದ ತಾಜುದ್ದೀನ್ ಎಂ ಎಸ್,ಸುಳ್ಯ ಪ್ರೆಸ್ ಕ್ಲಬ್ ಅದ್ಯಕ್ಷ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

ಊರಪರೂವರ ಸಹಕಾರದಿಂದ ಸುಮಾರು ಏಳುವರೆ ಲಕ್ಷ ರೂ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡಲು ಸಾಧ್ಯ ವಾಯಿತು.
ಜಟ್ಟಿಪಳ್ಳದ ಊರಲ್ಲಿ ಇರುವ ಯುವಕರು ಹಾಗೂ ಪರವೂರಿನಲ್ಲಿರುವ ಯುವಕರು ವಾಟ್ಸಪ್ ಗ್ರೂಪ್ ಮೂಲಕ ಇಂತಹ ಸುಂದರವಾದ ಮನೆ ನಿರ್ಮಿಸಿ ಕೊಡಲು ಸಾಧ್ಯವಾಯಿತು ಎಂದು ದನಸಂಗ್ರಹ ಉಸ್ತುವಾರಿ ವಹಿಸಿಕೊಂಡ ಅನಿವಾಸಿ ಉದ್ಯಮಿ ವಿಕೆ ಮುನೀರ್ ಜಟ್ಟಿಪಳ್ಳ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು