53 ಲಕ್ಷ ರೂ.ವೆಚ್ಚದಲ್ಲಿ ನೂತನ ಕಟ್ಟಡ















ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೇನ್ಯದಲ್ಲಿ ಸುಮಾರು 53 ಲಕ್ಷ ರೂ.ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಕಾರ್ಯ ನಡೆಯಲ್ಲಿದ್ದು ಎ.26 ರಂದು ಗುದ್ದಲಿ ಪೂಜೆ ಕಾರ್ಯಕ್ರಮ ನಡೆಯಿತು.

ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ, ಉಪಾಧ್ಯಕ್ಷ ಸದಾನಂದ ಕಾರ್ಜ ಸಂಘದ ಪೂರ್ವಾಧ್ಯಕ್ಷ ಗಣೇಶ್ ಪೈ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ,ನಿರ್ದೇಶಕರಾದ ಸುಬ್ರಮಣ್ಯ ಕುಳ, ಲಿಗೋಧರ ಆಚಾರ್ಯ ನಾಯರ್ ಕೆರೆ. ಚಿನ್ನಪ್ಪ ಗೌಡ ಚೊಟ್ಟೆಮಜಲು , ವಾಚಣ್ಣ ಕೆರೆಮೂಲೆ ಮುದರ ಐವತ್ತೊಕ್ಲು , ಆರುಣ ರೈ ಕೇನ್ಯ, ವಾಸುದೇವ ಗೌಡ ಕೆರೆಕ್ಕೋಡಿ, ತಿಮ್ಮಪ್ಪ ಗೌಡ ಕೂತ್ಕುಂಜ ,ಶ್ರೀಮತಿ ವನಿತಾ ಅತ್ಯಡ್ಕ, ಶ್ರೀಮತಿ ಬೇಬಿ ಕಟ್ಟ , ಸಂಘದ ಮಾಜಿ ನಿರ್ದೇಶಕರಾದ ರಘುನಾಥ ರೈ ಕೆ., ಶ್ರೀಕೃಷ್ಣ ಭಟ್ ಪಟೋಳಿ, ಬೀದಿಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಲೋಕೇಶ್ ಕಟ್ಟ, ಇಂಜಿನಿಯರ್ ರಾಮಣ್ಣ, ಗುತ್ತಿಗೆದಾರ ಮೋಹನದಾಸ್, ಸಂಘದ ಸದಸ್ಯರು, ಸಿಬ್ಬಂದಿಗಳು, ಊರವರು ಉಪಸ್ಥಿತರಿದ್ದರು. ವೈಧಿಕ ಕಾರ್ಯಕ್ರಮಗಳನ್ನು ರಾಜೇಶ ಕಣ್ಕಲ್ ನೆರವೇರಿಸಿದರು.










