ಇಂದು ಸಂಜೆ ಸಿಡಿಲಬ್ಬರ ದೊಂದಿಗೆ ಸುರಿದ ಭಾರಿ ಗಾಳಿ ಮಳೆಗೆ ಬೋರುಗುಡ್ಡೆ ಬಳಿ ಮನೆಯೊಂದಕ್ಕೆ ಸಿಡಿಲು ಬಡಿದು ಮನೆಯ ಗೋಡೆ ಹಾಗೂ ವಿದ್ಯುತ್ ಉಪಕರಣಗಳು ಹಾನಿ ಯಾಗಿದೆ.









ಬೋರುಗುಡ್ಡೆ ನಿವಾಸಿ ಇಬ್ರಾಹಿಂ ಡಿ ಎಚ್ ಎಂಬ ವರ ಮನೆಯ ಗೋಡೆಗೆ ಸಿಡಿಲು ಬಡಿದಿದ್ದು ಈ ವೇಳೆ ಮನೆಯಲ್ಲಿ ಇಬ್ರಾಹಿಂ ಹಾಗೂ ಅವರ ಪತ್ನಿ ಮತ್ತು ಮಕ್ಕಳು ಇದ್ದು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಆದರೆ ಮನೆಯ ವಿದ್ಯುತ್ ಮೀಟರ್ ಬಾಕ್ಸ್ ಹಾಗೂ ಇನ್ನಿತರ ಉಪಕರಣಗಳಿಗೆ ಹಾನಿ ಸಂಭವಿಸಿದೆ.










