ಪಂಜದಲ್ಲಿ ಎರಡನೇ ದಿನದ ಭಜನಾ ತರಬೇತಿ ಶಿಬಿರ

0

ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ
ಶ್ರೀ ಶಾರದಾಂಬಾ ಭಜನಾ ಮಂಡಳಿ(ರಿ)ಪಂಜ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಸುಳ್ಯ ತಾಲೂಕು,ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಕಡಬ ತಾಲೂಕು ಇದರ ಸಹಕಾರದಲ್ಲಿ 16ನೇ ವರ್ಷದ ಭಜನಾ ತರಬೇತಿ ಶಿಬಿರ ಆರಂಭ
ಗೊಂಡಿದ್ದು ಎ.29 ರಂದು ಎರಡನೇ ದಿನದ ತರಬೇತಿ ಶಿಬಿರ ನಡೆಯಿತು.


ತರಬೇತುದಾರರಾಗಿ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ವಿ ಆಚಾರ್ಯ ಕಲ್ಮಡ್ಕ ಮತ್ತು ವೆಂಕಟ್ರಮಣ ಆಚಾರ್ಯ ಕಲ್ಮಡ್ಕ ಪಾಲ್ಗೊಂಡಿದ್ದರು.

ಭಜನಾ ತರಬೇತಿ ಮೇ.4 ತನಕ ನಡೆಯಲಿದೆ. ಮೇ.4 ರಂದು ಅರ್ಧ ಏಕಾಹ ಭಜನಾ ಕಾರ್ಯಕ್ರಮ (ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ) ನಡೆಯಲಿದೆ. ಅದೇ ದಿನ ಪೂರ್ವಾಹ್ನ ಗಂಟೆ 10.30 ರಿಂದ ಶ್ರೀ ಸತ್ಯನಾರಾಯಣ ದೇವರ ಪೂಜೆ.ಸಂಜೆ ಗಂಟೆ 4 ರಿಂದ ಸಮಾರೋಪ ಸಮಾರಂಭ ನಡೆಯಲಿದೆ.